ದೆಹಲಿ,15 ಅಕ್ಟೋಬರ್ (ಹಿ.ಸ):
ಆ್ಯಂಕರ್ :
ದೆಹಲಿಯಲ್ಲಿ ನಾಳೆಯಿಂದ ಇದೇ ೨೦ ರವರೆಗೆ ಸೇನಾ ಕಮಾಂಡರ್ಗಳ ಸಮ್ಮೇಳನ ನಡೆಯಲಿದೆ. ಉನ್ನತಮಟ್ಟದ ಈ ದ್ವೈವಾರ್ಷಿಕ ಕಾರ್ಯಕ್ರಮ, ಭಾರತೀಯ ಸೇನೆಗೆ ಪ್ರಮುಖ ನೀತಿ-ನಿರ್ಧಾರಗಳನ್ನು ರೂಪಿಸುವುದಕ್ಕೆ ವೇದಿಕೆಯಾಗಲಿದೆ. ಈ ಸೇನಾ ಕಮಾಂಡರ್ಗಳ ಸಮ್ಮೇಳನವನ್ನು ಹೈಬ್ರಿಡ್ ರೂಪದಲ್ಲಿ ಆಯೋಜಿಸಲಾಗುತ್ತಿದೆ. ಸೇನಾ ಕಮಾಂಡರ್ಗಳು ಮತ್ತು ಇತರ ಹಿರಿಯ ಅಧಿಕಾರಿಗಳು ಮೊದಲ ದಿನದಂದು ಮುಖಾಮುಖಿಯಾಗಿ ಭೇಟಿಯಾಗಲಿದ್ದು, ನಂತರ ಉಳಿದ ಚರ್ಚೆಗಳನ್ನು ಭೌತಿಕ ರೂಪದಲ್ಲಿ ನಡೆಸಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ೧೮ ರಂದು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ರಕ್ಷಣಾಪಡೆಗಳ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾಪಡೆ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತು ವಾಯುಪಡೆ ಮುಖ್ಯಸ್ಥ ವಿ.ಆರ್.ಚೌಧರಿ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಡಾ.ಅಜಯ್ ಕುಮಾರ್ ಸೂದ್ ಅವರು, ರಾಷ್ಟ್ರೀಯ ಭದ್ರತೆಗಾಗಿ ತಂತ್ರಜ್ಞಾನವನ್ನು ನಿಯಂತ್ರಿಸುವುದು ಎಂಬ ವಿಷಯದ ಕುರಿತು ಭಾಷಣ ಮಾಡಲಿದ್ದಾರೆ. ಕಮಾಂಡರ್ಗಳ ಉನ್ನತ ನಾಯಕತ್ವವು ಭಾರತೀಯ ಸೇನೆಯ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸುವುದರ ಜೊತೆಗೆ ಪ್ರಸ್ತುತ ಮತ್ತು ಹೊಸದಾಗಿ ಹೊರಹೊಮ್ಮುವ ಭದ್ರತಾ ಸನ್ನಿವೇಶಗಳ ಬಗ್ಗೆ ಪರಿಶೀಲಿಸಲಿದೆ.
ಹಿಂದೂಸ್ತಾನ್ ಸಮಾಚಾರ್
