ನವದೆಹಲಿ, 20 ಆಗಸ್ಟ್ (ಹಿ.ಸ.) :
ಆ್ಯಂಕರ್ : ರಾಷ್ಟ್ರದ ರಾಜಧಾನಿ ದೆಹಲಿ ನಾಲ್ಕು ಶಾಲೆಗಳಿಗೆ ಇಂದು ಬೆಳಿಗ್ಗೆ ಬಾಂಬ್ ಬೆದರಿಕೆ ಬಂದಿದ್ದು, ಪೊಲೀಸರು, ಬಾಂಬ್ ಪತ್ತೆ ದಳ ಹಾಗೂ ಅಗ್ನಿಶಾಮಕ ದಳ ತುರ್ತು ಶೋಧ ಕಾರ್ಯಾಚರಣೆ ಆರಂಭಿಸಿವೆ.
ಬೆಳಿಗ್ಗೆ 7.40ಕ್ಕೆ ಮಾಳವೀಯ ನಗರದಲ್ಲಿರುವ ಎಸ್‌ಕೆವಿ ಶಾಲೆ, 7.42ಕ್ಕೆ ಪ್ರಸಾದ್ ನಗರದಲ್ಲಿರುವ ಆಂಧ್ರ ಶಾಲೆ, 8.20ಕ್ಕೆ ದ್ವಾರಕಾದ ರಾಹುಲ್ ಮಾಡೆಲ್ ಪಬ್ಲಿಕ್ ಶಾಲೆ ಹಾಗೂ 8.54ಕ್ಕೆ ಮ್ಯಾಕ್ಸ್ ಪಬ್ಲಿಕ್ ಶಾಲೆಗೆ ಬೆದರಿಕೆ ಕರೆಗಳು ಬಂದಿವೆ.
ಸೈಬರ್ ಸೆಲ್ ಎಲ್ಲಾ ಮೇಲ್‌ಗಳನ್ನು ವಶಪಡಿಸಿಕೊಂಡು, ಬೆದರಿಕೆ ಕಳುಹಿಸಿದವರ ಐಪಿ ವಿಳಾಸ ಪತ್ತೆಗೆ ತನಿಖೆ ಮುಂದುವರಿಸಿದೆ. ಇದುವರೆಗೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
