ನವದೆಹಲಿ,24ನವೆಂಬರ್ (ಹಿ.ಸ):
ಆ್ಯಂಕರ್ :
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕನಿಷ್ಠ ತಾಪಮಾನ ೯.೨ ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಪ್ರಸಕ್ತ ಋತುವಿನ ಅತ್ಯಂತ ಕಡಿಮೆ ಕನಿಷ್ಠ ತಾಪಮಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಗರಿಷ್ಠ ತಾಪಮಾನವು ಸುಮಾರು ೨೬ ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ.
ಈ ನಡುವೆ ನಿನ್ನೆ ನಗರದ ವಾಯು ಗುಣಮಟ್ಟ ೩೭೩ ಎಕ್ಯೂಐ ದಾಖಲಾಗಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ೩೮ ಮೇಲ್ವಿಚಾರಣಾ ಕೇಂದ್ರಗಳಲ್ಲಿ ಕನಿಷ್ಠ ೧೫ ಕೇಂದ್ರಗಳಲ್ಲಿ ಎಕ್ಯೂಐ ’ತೀವ್ರ’ ವಿಭಾಗದಲ್ಲಿ ದಾಖಲಾಗಿದ್ದರೆ, ೨೨ ಮೇಲ್ವಿಚಾರಣಾ ಕೇಂದ್ರಗಳು ’ಅತ್ಯಂತ ಕಳಪೆ’ ವಿಭಾಗದಲ್ಲಿ ಎಕ್ಯೂಐ ಅನ್ನು ದಾಖಲಿಸಿವೆ.
ಶೂನ್ಯದಿಂದ ೫೦ ರವರೆಗಿನ ಂಕಿI ಅನ್ನು ಉತ್ತಮ ಎಂದು, ೫೧ ರಿಂದ ೧೦೦ ತೃಪ್ತಿಕರ, ೧೦೧ ರಿಂದ ೨೦೦ ಮಧ್ಯಮ, ೨೦೧ ರಿಂದ ೩೦೦ ಕಳಪೆ, ೩೦೧ ರಿಂದ ೪೦೦ ಅತ್ಯಂತ ಕಳಪೆ ಮತ್ತು ೪೦೧ ರಿಂದ ೫೦೦ ತೀವ್ರ ಎಂದು ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ನವದೆಹಲಿಯಲ್ಲಿ ವಾಯು ಗುಣಮಟ್ಟ ಸುಧಾರಿಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
