ನವದೆಹಲಿ,31ಅಕ್ಟೋಬರ್ (ಹಿ.ಸ):
ಆ್ಯಂಕರ್ :ದೇಶಾದ್ಯಂತ ನಡೆದ ’ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು ಮತ್ತು ನಾಳೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿದೆ. ಇದೇ ೩೧ ರಂದು ನವದೆಹಲಿಯ ಕರ್ತವ್ಯ ಪಥದಲ್ಲಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ.
ಈ ಅಭಿಯಾನಕ್ಕಾಗಿ ದೇಶದೆಲ್ಲೆಡೆಯಿಂದ ಅಮೃತ ಕಲಶಗಳನ್ನು ನವದೆಹಲಿಗೆ ತರಲಾಗುತ್ತಿದೆ. ಸ್ವಾತಂತ್ರ್ಯದ ೭೫ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ೨೦೨೧ರ ಮಾರ್ಚ್ ೧೨, ರಂದು ಆಜಾದಿ ಕಾ ಅಮೃತ್ ಮಹೋತ್ಸವದ ಎರಡು ವರ್ಷಗಳ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ಇರುವ ’ಅಮೃತ ವಾಟಿಕ ಉದ್ಯಾನ’ದ ಗಿಡಗಳಿಗೆ ಹಾಕಲು ದೇಶದೆಲ್ಲೆಡೆಯಿಂದ ಸಂಗ್ರಹಿಸಿರುವ ಮಣ್ಣನ್ನು ಬಳಸಲಾಗುವುದು. ಅಮೃತ ವಾಟಿಕ ಉದ್ಯಾನ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ’ಏಕ್ ಭಾರತ್ ಶ್ರೇಷ್ಠ ಭಾರತ್’ ಚಿಂತನೆಯ ಸಂಕೇತವಾಗಿದೆ. ’ಅಮೃತ ಕಳಶ’ಗಳನ್ನು ಬೆಂಗಳೂರಿನಿಂದ ದೆಹಲಿಗೆ ಕೊಂಡೊಯ್ಯುತ್ತಿರುವ ವಿಶೇಷ ರೈಲು ಇಂದು ರಾಷ್ಟ್ರ ರಾಜಧಾನಿ ದೆಹಲಿ ತಲುಪಲಿದೆ. ಅದೇ ರೀತಿ ಜಮ್ಮುವಿನಿಂದ ನವದೆಹಲಿಗೂ ವಿಶೇಷ ರೈಲು ನಿನ್ನೆ ತನ್ನ ಪ್ರಯಾಣ ಆರಂಭಿಸಿದೆ.
ಹಿಂದೂಸ್ತಾನ್ ಸಮಾಚಾರ್
