ತಿರುಪತಿ, 29ಅಕ್ಟೋಬರ್ (ಹಿ.ಸ):
ಆ್ಯಂಕರ್ :
ಇಲ್ಲಿನ ತಿರುಮಲ ವೆಂಕಟೇಶ್ವರ ದೇಗುಲಕ್ಕೆ ಹೋಗುವ ಕಾಲು ದಾರಿಯಲ್ಲಿ ಮತ್ತೆ ಚಿರತೆ, ಕರಡಿ ಪ್ರತ್ಯಕ್ಷವಾಗಿದೆ. ಇದರಿಂದಾಗಿ ಜನರಿಗೆ ಓಡಾಡುವಾಗಿ ಅತಿ ಎಚ್ಚರಿಕೆಯಿಂದ ಇರಲು ಟಿಟಿಡಿ ತಿಳಿಸಿದೆ. ಅ.14ರಿಂದ 27ರವರೆಗೆ ಇಲ್ಲಿನ ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ ದೇಗುಲ ಹಾಗೂ ಅಲಿಪಿರಿ ಬಳಿ ಚಿರತೆ ಹಾಗೂ ಕರಡಿ ಸಂಚರಿಸಿದ್ದು, ಇಲ್ಲಿನ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಕೆಲ ದಿನಗಳ ಹಿಂದಷ್ಟೇ ಚಿರತೆಯೊಂದು ಬಾಲಕಿಯನ್ನು ಹೊತ್ತೊಯ್ದು ಕೊಂದು ಹಾಕಿದ್ದ ಕಾರಣ ಈ ಬಾರಿ ಭಕ್ತಾದಿಗಳಿಗೆ ಸಂಚರಿಸುವಾಗ ಬಡಿಗೆ ಹಿಡಿದು, ಮಕ್ಕಳನ್ನು ಒಂಟಿಯಾಗಿ ಬಿಟ್ಟು ತೆರಳದಂತೆ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಸೂಚನೆ ನೀಡಿತ್ತು. ಮಾತ್ರವಲ್ಲ ಅಧಿಕಾರಿಗಳು 6ಕ್ಕೂ ಹೆಚ್ಚು ಚಿರತೆಗಳನ್ನು ಹಿಡಿದು ವಿವಿಧ ಸ್ಥಳಗಳಿಗೆ ಸ್ಥಳಾಂತರಿಸಿದರು.
ಹಿಂದೂಸ್ತಾನ್ ಸಮಾಚಾರ್
