ಪಾಟ್ನಾ, 08 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಿಹಾರದ ಸೀತಾಮರ್ಹಿಯ ಪುನೌರಾ ಧಾಮದಲ್ಲಿ ಇಂದು ಭವ್ಯವಾದ ಜಾನಕಿ ದೇವಾಲಯ ಶಿಲಾನ್ಯಾಸ ಕಾರ್ಯಕ್ರಮ ನಡೆಯುತ್ತಿದೆ. ಈ ಪವಿತ್ರ ಸ್ಥಳವನ್ನು ಮಾತಾ ಸೀತೆಯ ಜನ್ಮಸ್ಥಳ ಎಂದು ಗೌರವಿಸಲಾಗುತ್ತದೆ. ಶಿಲಾನ್ಯಾಸ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ದೇಶದ ಭಾಗಗಳಿಂದ ಆಗಮಿಸಿರುವ ಸಂತರು, ಮಹಾತ್ಮರು ಮತ್ತು ಭಕ್ತರು ಭಾಗವಹಿಸುತ್ತಿದ್ದಾರೆ.
ಈ ಕುರಿತು ಅಮಿತ್ ಶಾ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದು ಈ ಕಾರ್ಯಕ್ರಮವನ್ನು “ಮಿಥಿಲೆಗೂ, ಇಡೀ ದೇಶಕ್ಕೂ ಅದೃಷ್ಟದ ದಿನ” ಎಂದಿದ್ದಾರೆ. ದೇವಾಲಯದ ಜೊತೆಗೆ, ಪುನೌರಾ ಧಾಮದ ಒಟ್ಟಾರೆ ಅಭಿವೃದ್ಧಿಗಾಗಿ ಬೃಹತ್ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗುತ್ತಿದೆ.
ಇದೇ ವೇಲಕೆ ಅಮಿತ್ ಶಾ ಸೀತಾಮರ್ಹಿ-ದೆಹಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸಹ ಹಸಿರು ನಿಶಾನೆ ತೋರಿಸಲಿದ್ದಾರೆ.
ಮಿಥಿಲಾ ಪ್ರದೇಶ (ಸೀತಾಮರ್ಹಿಯಿಂದ ನೇಪಾಳದ ಜನಕಪುರದವರೆಗೆ) ಈ ಕಾರ್ಯಕ್ರಮದ ಹಿನ್ನೆಲೆ ಸಂಭ್ರಮದಲ್ಲಿ ಮುಳುಗಿದೆ. ಕೋಲ್ಕತ್ತಾದ ಕಲಾವಿದರು ದೇವಾಲಯವನ್ನು ಹೂವಿನಿಂದ ಅಲಂಕರಿಸಿದ್ದಾರೆ, ಮನೆಗಳ ಅಂಗಳಗಳಲ್ಲಿ ರಂಗೋಲಿ, ಬೀದಿಗಳಲ್ಲಿ ಭಜನೆ-ಕೀರ್ತನೆಗಳು ಪ್ರತಿಧ್ವನಿಸುತ್ತಿವೆ. ಅಯೋಧ್ಯೆ, ಕಾಶಿ, ಜನಕಪುರ ಮತ್ತು ದಕ್ಷಿಣ ಭಾರತದಿಂದ ಸಂತರು ಮತ್ತು ಸಾಧುಗಳು ಆಗಮಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
