ದೆಹಲಿ, 15 ಜನವರಿ(ಹಿ.ಸ):
ಆ್ಯಂಕರ್ :
ಪ್ರಧಾನಮಂತ್ರಿ ಜನ್ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನದ ಭಾಗವಾಗಿ ಪ್ರಧಾನಮಂತ್ರಿ ಆವಾಸ್ ಗ್ರಾಮೀಣ ಯೋಜನೆಯಡಿ ಒಂದು ಲಕ್ಷ ಫಲಾನುಭವಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮೊದಲ ಕಂತಿನ ಹಣ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅವರು ಪಿಎಂ-ಜನ್ಮನ್ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಪ್ರಯೋಜನ ತಲುಪಿಸಿ, ಅವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು, ಅದರಲ್ಲೂ ಬುಡಕಟ್ಟು ಗುಂಪುಗಳ ದುರ್ಬಲರ ಸಾಮಾಜಿಕ-ಆರ್ಥಿಕ ಕಲ್ಯಾಣಕ್ಕಾಗಿ ಇದನ್ನು ಕಳೆದ ವರ್ಷ ನವೆಂಬರ್ನಲ್ಲಿ ಆರಂಭಿಸಲಾಗಿದೆ.
<><><><><>
ಪ್ರಧಾನಮಂತ್ರಿ ನರೇಂದ್ರ ಮೋದಿ ಮಕರ ಸಂಕ್ರಾಂತಿಯ ಅಂಗವಾಗಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರು, ಈ ಹಬ್ಬವು ಧ್ಯಾನ ಮತ್ತು ದಾನದ ಪವಿತ್ರ ಸಂಪ್ರದಾಯದೊಂದಿಗೆ ಥಳುಕು ಹಾಕಿಕೊಂಡಿದೆ ಎಂದು ಹೇಳಿದ್ದಾರೆ. ಪ್ರಕೃತಿಯ ಈ ಹಬ್ಬದಲ್ಲಿ ದೇಶದ ಜನತೆಗೆ ಸಂತೋಷ, ಸಮೃದ್ಧಿ, ಆದೃಷ್ಟ ನೀಡಬೇಕು ಎಂದು ಸೂರ್ಯ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಪೊಂಗಲ್ ಹಬ್ಬದ ಶುಭಾಶಯ ಕೋರಿರುವ ಪ್ರಧಾನಿ ಸುಗ್ಗಿಯ ಈ ಹಬ್ಬ ಹೊಸ ಭರವಸೆಗಳೊಂದಿಗೆ ಹೊಸ ಆರಂಭ ಜನತೆಗೆ ಆಗಲಿ. ಹೊಸ ಸಂತಸ, ಸಮೃದ್ಧಿ ಉಂಟಾಗಲಿ ಎಂದಿದ್ದಾರೆ. ಮಾಘ ಬಿಹು ಪ್ರಯುಕ್ತ ಕೂಡ ಶುಭ ಹಾರೈಸಿರುವ ಪ್ರಧಾನಿ ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಂಭ್ರಮ ಮನೆ ಮಾಡಲಿ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
