ನವದೆಹಲಿ,9 ನವೆಂಬರ್ (ಹಿ.ಸ):
ಆ್ಯಂಕರ್ :
ಉತ್ತರಾಖಂಡ್ ಇಂದು ತನ್ನ ೨೩ನೇ ಸಂಸ್ಥಾಪನಾ ದಿನ ಆಚರಿಸುತ್ತಿದೆ. ೨೦೦೦ ದಲ್ಲಿ ಇದೇ ದಿನದಂದು ಉತ್ತರ ಪ್ರದೇಶದಿಂದ ಬೇರ್ಪಟ್ಟು ಉತ್ತರಾಖಂಡ್ ದೇಶದ ೨೭ನೇ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದಿತು. ರಾಜ್ಯ ಸ್ಥಾಪನಾ ದಿನಾಚರಣೆ ಅಂಗವಾಗಿ ರಾಜ್ಯದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರಮುಖ ಕಾರ್ಯಕ್ರಮ ಡೆಹರಾಡೂನ್ನ ಪೊಲಿಸ್ ಲೈನ್ನಲ್ಲಿ ಆಯೋಜನೆಯಾಗಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಉಪಸ್ಥಿತರಿರಲಿದ್ದಾರೆ. ೨೩ ವರ್ಷಗಳಲ್ಲಿ ಉತ್ತರಾಖಂಡದ ಸಂಸ್ಥಾಪನಾ ದಿನದಂದು ಭಾರತದ ರಾಷ್ಟ್ರಪತಿಗಳು ಪಾಲ್ಗೊಳ್ಳುತ್ತಿರುವುದು ಇದೇ ಮೊದಲು.
ಹಿಂದೂಸ್ತಾನ್ ಸಮಾಚಾರ್
