ಇಂದೋರ್, 25 ಡಿಸೆಂಬರ್(ಹಿ.ಸ):
ಆ್ಯಂಕರ್ :
ಮಧ್ಯಪ್ರದೇಶದ ಇಂದೋರ್ನ ಹುಕುಂಚಂದ್ ಮಿಲ್ನ ಕಾರ್ಮಿಕರನ್ನುದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ನಿಮಿತ್ತ ಆಚರಿಸಲ್ಪಡುವ ಉತ್ತಮ ಆಡಳಿತ ದಿನದ ಅಂಗವಾಗಿ ಇಂದು ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಅವರು ವರ್ಚುಯಲ್ ಮಾದರಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು ೩೦ ವರ್ಷಗಳಿಂದ ಬಾಕಿಯಿದ್ದ ೨೨೪ ಕೋಟಿ ರೂಪಾಯಿಗಳನ್ನು ಈ ಸಂದರ್ಭದಲ್ಲಿ ೫ ಸಾವಿರ ಕಾರ್ಮಿಕರು ಪಡೆಯಲಿದ್ದಾರೆ. ಮುಖ್ಯಮಂತ್ರಿ ಮೋಹನ್ ಯಾದವ್, ನಿನ್ನೆ ಕಾರ್ಯಕ್ರಮದ ಸಿದ್ಧತೆಯ ಬಗ್ಗೆ ಪರಿಶೀಲನೆ ನಡೆಸಿದ್ದರು.
ಹಿಂದೂಸ್ತಾನ್ ಸಮಾಚಾರ್
