ನವದೆಹಲಿ, 20 ಡಿಸೆಂಬರ್(ಹಿ.ಸ):
ಆ್ಯಂಕರ್ :
ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರೊಬ್ಬರು ತಮ್ಮನ್ನು ಅಣುಕು ಮಾಡಿದ್ದು ಮತ್ತು ಅದನ್ನು ರಾಹುಲ್ ಗಾಂಧಿ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಈ ದೃಶ್ಯಗಳು ರಾಜ್ಯಸಭಾ ಅಧ್ಯಕ್ಷ ಹಾಗು ಉಪರಾಷ್ಟ್ರಪತಿ ಜಗದೀಪ್ ಧನಖರ್ ಅವರನ್ನು ಬೇಸರಗೊಳಿಸಿವೆ. ಆ ಘಟನೆಗಳು ತಮ್ಮ ಮೇಲೆ ನಡೆದ ವೈಯಕ್ತಿಕ ದಾಳಿ ಎಂದು ವ್ಯಾಕುಲಗೊಂಡಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಜಗದೀಪ್ ಧನಖರ್ಗೆ ಕರೆ ಮಾಡಿ ಸಮಾಧಾನ ಹೇಳುವ ಕೆಲಸ ಮಾಡಿದ್ದಾರೆ. ಈ ವಿಚಾರವನ್ನು ಉಪರಾಷ್ಟ್ರಪತಿಗಳೇ ಖುದ್ದಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಕರೆ ಮಾಡಿ, ನಿನ್ನೆ ಪವಿತ್ರ ಸಂಸತ್ ಭವನದಲ್ಲಿ ಕೆಲ ಸಂಸದರು ಮಾಡಿದ ಅಣುಕು ಕೆಲಸಗಳಿಂದ ಬಹಳ ನೋವಾಯಿತು ಎಂದು ಸಮಾಧಾನ ಹೇಳಿದ್ದಾರೆ’ ಎಂದು ಜಗದೀಪ್ ಧನಖರ್ ಬರೆದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
