ಅಯೋಧ್ಯೆ, 12 ಜನವರಿ(ಹಿ.ಸ):
ಆ್ಯಂಕರ್ :
ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೊರತುಪಡಿಸಿ ಬೇರೆ ಯಾವ ಸಿಎಂಗಳಿಗೂ ಆಹ್ವಾನ ನೀಡಿಲ್ಲ ಎಂಬ ಮಾಹಿತಿಯೊಂದು ವರದಿಯಾಗಿದೆ.
ಹೌದು. ಜನವರಿ 22 ರಂದು ದೇಶಾದ್ಯಂತ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದಲಿತ ಪ್ರಮುಖರು, ಕರಸೇವಕರು ಹಾಗೂ ಹಲವಾರು ಗಣ್ಯ ವ್ಯಕ್ತಿಗಳ ಕುಟುಂಬಗಳನ್ನು ಕೂಡ ಈ ಬೃಹತ್ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ. ಅಂತೆಯೇ ಯೋಗಿ ಆದಿತ್ಯನಾಥ್ ಅವರಿಗೆ ಮಾತ್ರ ಆಮಂತ್ರಣ ನೀಡಲಾಗಿದ್ದು, ಬೇರೆ ಯಾವುದೇ ಮುಖ್ಯಮಂತ್ರಿಗಳಿಗೆ ಸರ್ಕಾರ ಆಹ್ವಾನವನ್ನು ಕಳುಹಿಸಿಲ್ಲ. ಜೊತೆಗೆ ಕೇಂದ್ರ ಸಚಿವರುಗಳು, ರಾಜ್ಯ ಸಚಿವರುಗಳು ಹಾಗೂ ಕೆಲ ರಾಜಕೀಯ ಗಣ್ಯರಿಗೂ ಆಹ್ವಾನ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಜನವರಿ 22 ರಂದು ನಡೆಯಲಿರುವ ಸಮಾರಂಭಕ್ಕೆ ಆಹ್ವಾನಿತರಲ್ಲಿ ದಲಿತ ಐಕಾನ್ಗಳಾದ ಬಿಆರ್ ಅಂಬೇಡ್ಕರ್, ಜಗಜೀವನ್ ರಾಮ್, ಕಾನ್ಶಿರಾಮ್ ಅವರ ಕುಟುಂಬದ ಸದಸ್ಯರು ಸೇರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ಕಾರ್ಯಕ್ರಮಕ್ಕೆ ರಾಮ ಜನ್ಮಭೂಮಿ ಆಂದೋಲನದ ಸಮಯದಲ್ಲಿ ಮಡಿದ ಕರಸೇವಕರ ಕುಟುಂಬ ಸದಸ್ಯರಿಗೂ ಆಹ್ವಾನ ನೀಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್
