ವಾಷಿಂಗ್ಟನ್ ಡಿಸಿ , 16ನವೆಂಬರ್ (ಹಿ.ಸ):
ಆ್ಯಂಕರ್ :ಪರಿಸರ ಸ್ನೇಹಿ ಅಭಿವೃದ್ಧಿಪರ ಕಾರ್ಯಕ್ರಮಗಳ ಕುರಿತು ಭಾರತ-ಅಮೆರಿಕಾ ನಡುವೆ ಹಲವು ಮಹತ್ವದ ಒಪ್ಪಂದಗಳಿಗೆ ಅಂಕಿತ ಹಾಕಲು ತೀರ್ಮಾನಿಸಲಾಗಿದೆ.
೪ ದಿನಗಳ ಕಾಲ ಅಮೆರಿಕಾ ಪ್ರವಾಸ ಕೈಗೊಳ್ಳಲಿರುವ ಕೇಂದ್ರ ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಅವರು, ಪರಿಸರ ಸ್ನೇಹಿ, ಅನ್ವೇಷಣೆ, ಅಭಿವೃದ್ಧಿ ಹಾಗೂ ಪ್ರಗತಿದಾಯಕ ಯೋಜನೆಗಳ ಬಗ್ಗೆ ಒಡಂಬಡಿಕೆ ಮಾಡಿಕೊಳ್ಳಲಿದ್ದಾರೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.
ಇಂಡೋ-ಪೆಸಿಫಿಕ್ ಆರ್ಥಿಕ ಬೆಳವಣಿಗೆ ಕುರಿತು ಅಮೆರಿಕಾದಲ್ಲಿ ೧೨ ಗಣ್ಯರ ನೇತೃತ್ವದ ಸಭೆಯಲ್ಲಿ ಒಪ್ಪಂದಗಳಿಗೆ ಸಹಿ ಹಾಕುವ ಕಾರ್ಯಕ್ರಮವಿದೆ ಎಂದು ಅಮೆರಿಕಾದಲ್ಲಿರುವ ರಾಯಭಾರಿ ಜಿನಾ ರೈಮನ್ಡೊ ತಿಳಿಸಿದ್ದಾರೆ.
ಇಂಡೋ-ಪೆಸಿಫಿಕ್ ದೇಶಗಳ ದ್ವಿಪಕ್ಷೀಯ ಬಾಂಧವ್ಯ ಒಡಂಬಡಿಕೆಯಲ್ಲಿ ಆಸ್ಟ್ರೇಲಿಯಾ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮಲೇಷಿಯಾ, ನ್ಯೂಜಿಲೆಂಡ್, ಫಿಲಿಫೈನ್ಸ್, ಸಿಂಗಾಪೂರ್, ಥೈಲ್ಯಾಂಡ್, ವಿಯೆಟ್ನಾ ಹಾಗೂ ಬುರ್ನಿ, ಫಿಜಿ, ಇಂಡೋನೇಷಿಯಾ, ಧರುಸಲಾಂ ಮುಂತಾದ ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಹಿಂದೂಸ್ತಾನ್ ಸಮಾಚಾರ್
