ಅಮೆರಿಕ ಮತ್ತು ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ತಮ್ಮ ನಡುವಿನ ರಕ್ಷಣಾ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯನ್ನಿಟ್ಟಿವೆ. ಅಬುಧಾಬಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಯುಎಇ ಸಚಿವ ಮೊಹಮ್ಮದ್ ಅಲ್ ಮಜ್ರೂಯಿ ಮತ್ತು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೇತ್ ಮಹತ್ವಪೂರ್ಣ ರಕ್ಷಣಾ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದವು ಎರಡು ರಾಷ್ಟ್ರಗಳ ನಡುವೆ ಸೇನಾ ಸಹಕಾರವನ್ನು ಹೊಸ ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಮುಖವಾಗಿದೆ.
BulletsIn
-
ಯುಎಇ ಮತ್ತು ಅಮೆರಿಕ ಮಹತ್ವದ ರಕ್ಷಣಾ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿವೆ.
-
ಒಪ್ಪಂದಕ್ಕೆ ಅಬುಧಾಬಿಯಲ್ಲಿ ಸಹಿ ಹಾಕಲಾಯಿತು.
-
ಯುಎಇ ಪರವಾಗಿ ಸಚಿವ ಮೊಹಮ್ಮದ್ ಅಲ್ ಮಜ್ರೂಯಿ ಭಾಗವಹಿಸಿದರು.
-
ಅಮೆರಿಕ ಪರವಾಗಿ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೇತ್ ಒಪ್ಪಂದಕ್ಕೆ ಸಹಿ ಹಾಕಿದರು.
-
ಮಿಲಿಟರಿ ಸಹಕಾರ ಹೆಚ್ಚಿಸಲು ಒತ್ತುವರಿ ನೀಡಲಾಗಿದೆ.
-
ನವೋದ್ಯಮ ಮತ್ತು ಸಂಶೋಧನೆ ಕ್ಷೇತ್ರಗಳಲ್ಲಿ ಸಹಯೋಗ ವಿಸ್ತರಿಸಲಾಗುತ್ತದೆ.
-
ಯುದ್ಧ ಉಪಕರಣಗಳ ಆಧುನೀಕರಣಕ್ಕೂ ಒತ್ತು ನೀಡಲಾಗಿದೆ.
-
ಯುಎಇ ಈಗ ಟೆಕ್ಸಾಸ್ ನ್ಯಾಷನಲ್ ಗಾರ್ಡ್ ಜೊತೆ ಅಧಿಕೃತ ಪಾಲುದಾರವಾಗಿದೆ.
-
ಸೈಬರ್ ಭದ್ರತೆ ಹಾಗೂ ಕ್ಷಿಪಣಿ ರಕ್ಷಣಾ ತಂತ್ರಜ್ಞಾನಗಳಲ್ಲಿ ಸಹಕಾರ ಜೋರಾಗಿದೆ.
-
ವಿಪತ್ತು ನಿರ್ವಹಣೆಯಲ್ಲಿ ಸಹಕಾರ ಹೆಚ್ಚಳವಾಗಲಿದೆ.
