ಲಂಡನ್, 10 ಜನವರಿ(ಹಿ.ಸ):
ಆ್ಯಂಕರ್ :ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬ್ರಿಟನ್ನಿನ ರಕ್ಷಣಾ ಸಚಿವ ಗ್ರಾಂಟ್ ಶಾಪ್ಸ್ ಅವರನ್ನು ಭೇಟಿ ಮಾಡಿದರು ಮತ್ತು ಭಾರತ-ಯುಕೆ ರಕ್ಷಣಾ ಸಂಬಂಧಗಳ ಆಯಾಮಗಳನ್ನು ಪರಿಶೀಲಿಸಿದರು. ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ರಾಜನಾಥ್ ಸಿಂಗ್ ಅವರು, ರಕ್ಷಣಾ ಸಹಕಾರ, ಭದ್ರತೆ ಮತ್ತು ರಕ್ಷಣಾ ಕೈಗಾರಿಕಾ ಸಹಕಾರವೃದ್ಧಿ ಬಗ್ಗೆ ವ್ಯಾಪಕ ವಿಷಯಗಳ ಕುರಿತು ಫಲಪ್ರದ ಚರ್ಚೆಗಳನ್ನು ನಡೆಸಿದ್ದೇವೆ. ಈ ಸಂದರ್ಭದಲ್ಲಿ, ಯುಕೆ ಮತ್ತು ಭಾರತದ ನಡುವಿನ ಸಂಬಂಧವು ಕೇವಲ ವಹಿವಾಟಿಗೆ ಸಮೀತವಾಗಿಲ್ಲ ಎಂದು ಗ್ರಾಂಟ್ ಶಾಪ್ಸ್ ಒತ್ತಿ ಹೇಳಿದ್ದಾರೆ. ಎರಡೂ ದೇಶಗಳು ಅನೇಕ ಸಾಮ್ಯತೆಗಳನ್ನು ಮತ್ತು ಹಂಚಿಕೆಯ ಗುರಿಗಳೊಂದಿಗೆ ನೈಸರ್ಗಿಕ ಪಾಲುದಾರರಾಗಿದ್ದಾರೆ ಎಂದು ಅವರು ಹೇಳಿದರು. ದ್ವಿಪಕ್ಷೀಯ ರಕ್ಷಣಾ ಸಭೆಯ ನಂತರ ಭಾರತ ಮತ್ತು ಯುಕೆ ನಡುವೆ ಎರಡು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಈ ಒಡಂಬಡಿಕೆಗಳು ವಿಶೇಷವಾಗಿ ಯುವ ಜನರ ವಿನಿಮಯಕ್ಕೆ ಉತ್ತೇಜನ ನೀಡುತ್ತವೆ ಮತ್ತು ಎರಡು ದೇಶಗಳ ನಡುವಿನ ರಕ್ಷಣಾ ಸಂಶೋಧನೆಗೆ ಸಹಕಾರಿಯಾಗಲಿವೆ. ಎರಡು ದಿನಗಳ ಯುಕೆ ಪ್ರವಾಸದಲ್ಲಿರುವ ರಾಜನಾಥ್ ಸಿಂಗ್ ಇಂದು ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಮತ್ತು ವಿದೇಶಾಂಗ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ವ್ಯವಹಾರಗಳ ಕಾರ್ಯದರ್ಶಿ ಡೇವಿಡ್ ಕ್ಯಾಮೆರಾನ್ ಅವರನ್ನು ಭೇಟಿ ಮಾಡಲಿದ್ದಾರೆ. ಜತೆಗೆ ಲಂಡನ್ನಲ್ಲಿರುವ ಭಾರತೀಯ ಸಮುದಾಯವನ್ನು ಭೇಟಿಯಾಗಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
