ಇಸ್ಲಮಾಬಾದ್, 8 ಫೆಬ್ರವರಿ :
ಆ್ಯಂಕರ್ : ಪಾಕಿಸ್ತಾನದಲ್ಲಿ ಇಂದು ಗುರುವಾರ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಆರ್ಥಿಕ, ರಾಜಕೀಯ ಬಿಕ್ಕಟ್ಟಿನ ನಡುವೆ ವಿಪರೀತ ಹಣದುಬ್ಬರದಿಂದ ಜನ ತತ್ತರಿಸುತ್ತಿರುವ ಹೊತ್ತಲ್ಲಿ ಪಾಕ್ ಚುನಾವಣೆಗೆ ಸಾಕ್ಷಿ ಆಗುತ್ತಿದೆ.
ರಾಷ್ಟ್ರೀಯ ಅಸೆಂಬ್ಲಿಯ 336 ಸ್ಥಾನಗಳ ಪೈಕಿ 266 ಸ್ಥಾನಗಳಿಗೆ 12.85 ಕೋಟಿ ಮತದಾರರು ಮತ ಹಾಕಲಿದ್ದಾರೆ. 5121 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಗದ್ದುಗೆಗಾಗಿ ನವಾಜ್ ಷರೀಫರ ಪಿಎಂಎಲ್ , ಬಿಲಾವಲ್ ಭುಟ್ಟೋರ ಪಿಪಿಪಿ ಪೈಪೋಟಿ ಮಾಡುತ್ತಿವೆ.
