ಡಮಾಸ್ಕಸ್, 14 ಏಪ್ರಿಲ್ : ಆ್ಯಂಕರ್:ಇಸ್ರೇಲ್-ಹಮಾಸ್ ಯುದ್ಧದ ತಣ್ಣಗಾಗುವ ಮುನ್ನವೇ ಮಧ್ಯ ಪ್ರಾಚ್ಯದಲ್ಲಿ ಮತ್ತೆ ಭೀಕರ ಯುದ್ಧದ ಛಾಯೆ ಆವರಿಸಿದೆ. ಸಿರಿಯಾ ರಾಜಧಾನಿ ಡಮಾಸ್ಕಸ್ ನಲ್ಲಿನ ಇರಾನ್ ರಾಯಭಾರ ಕಚೇರಿ ಮೇಲೆ ಇಸ್ರೇಲ್ ವಾಯು ದಾಳಿ ನಡೆಸಿ, ಹಿರಿಯ ಅಧಿಕಾರಿಗಳನ್ನು ಹತ್ಯೆಗೈದ ಬಳಿಕ ಪ್ರತೀಕಾರದ ದಾಳಿಗೆ ಇರಾನ್ ಸಜ್ಜಾಗಿದೆ. ಇದರ ಮಧ್ಯೆ ಅಮೆರಿಕ ಕೂಡ ಎಂಟ್ರಿ ಕೊಟ್ಟಿದ್ದು ಮತ್ತೊಂದು ಘೋರ ಯುದ್ಧದ ಆತಂಕ ಎದುರಾಗಿದೆ.
ಈಗಾಗಲೇ ಇರಾನ್ 200 ಡ್ರೋನ್, ಬ್ಯಾಲಿಸ್ಟಿಕ್ ಮತ್ತು ಕ್ರೂಷಿಯಲ್ ಮಿಸೈಲ್ಗಳನ್ನು ಇಸ್ರೇಲ್ ಮೇಲೆ ಉಡಾಯಿಸಿದೆ. ಇವುಗಳನ್ನು ಗಡಿ ಭಾಗದಲ್ಲೇ ನಮ್ಮ ರಕ್ಷಣಾ ಪಡೆಗಳು ತಡೆ ಹಿಡಿದಿವೆ ಎಂದು ಇಸ್ರೇಲ್ ಹೇಳಿದೆ. ಇದರಿಂದ ನಮಗೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ ಅಷ್ಟೇ ಎಂದು ಹೇಳಿದೆ. ಇನ್ನು ವಿಶ್ವಸಂಸ್ಥೆಯ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ ಇದನ್ನು ಗಂಭೀರವಾಗಿ ಖಂಡಿಸಿದ್ದಾರೆ.
