ಕೊಲ್ಕತ್ತಾ, 15 ಫೆಬ್ರವರಿ :
ಆ್ಯಂಕರ್ : ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಕೊಲ್ಕತ್ತಾದ ಅಪೋಲೊ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಧವಾರ ಸಂದೇಶ ಖಾಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಬಿದ್ದು ಅವರು ಪ್ರಜ್ಞೆ ಕಳೆದುಕೊಂಡರು.
ತಕ್ಷಣವೇ ಅವರನ್ನು ಬಸಿರ್ಹತ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ 5:30ರ ಸುಮಾರಿಗೆ ಅವರನ್ನು ಕೋಲ್ಕತ್ತಾದ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ರಾಜ್ಯಪಾಲ ಸಿ.ವಿ.ಆನಂದ ಬೋಸ್ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಗುರುವಾರ ಆಸ್ಪತ್ರೆಗೆ ಭೇಟಿ ಆರೋಗ್ಯ ವಿಚಾರಿಸಿದ್ದಾರೆ. ಸುಕಾಂತರಿಗೆ ವಿಶ್ರಾಂತಿ ಅಗತ್ಯವಿದೆ. ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ಸುವೇಂದು ಹೇಳಿದ್ದಾರೆ.ಸದ್ಯ ಸುಕಾಂತ್ ಮಜುಂದಾರ್ ಐಸಿಯುನಲ್ಲಿದ್ದಾರೆ. ಎದೆ, ಪಕ್ಕೆಲುಬುಗಳು, ಬೆನ್ನಿನಲ್ಲಿ ನೋವು ಇದೆ. ಡ್ರಿಪ್ ಹೊರತುಪಡಿಸಿ ಅವರಿಗೆ ಏನನ್ನೂ ನೀಡುತ್ತಿಲ್ಲ.“ನಮ್ಮ ಯುವ ನಾಯಕ. ಬೇಗ ಚೆತರಿಸಿಕೊಳ್ಳಲಿ. ಅವರಿಗೆ 10-12 ಗಂಟೆಗಳ ವಿಶ್ರಾಂತಿ ಬೇಕು. ಆಸ್ಪತ್ರೆಗಳು ವಿಶ್ವಾಸಾರ್ಹವಾಗಿವೆ. ಎಲ್ಲವು ಸರಿಯಾಗುತ್ತದೆ. ಬಿಜೆಪಿ ಸಂಸದರಿಗೆ ಈಗ ವಿಶ್ರಾಂತಿ ಬೇಕಾಗಿದೆ.ಇಂದು ಮಧ್ಯಾಹ್ನ 12 ಗಂಟೆಯ ಮೊದಲು ಯಾರೂ ಭೇಟಿ ಮಾಡಲು ಬರಬೇಡಿ ಎಂದು ಸುವೇಂದು ಮನವಿ ಮಾಡಿದ್ದಾರೆ.
