ಕೌಲಾಲಂಪುರ,
ಮಲೇಷ್ಯಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಡಾ ಎಸ್.ಜೈಶಂಕರ್ ಕೌಲಾಲಂಪುರದಲ್ಲಿ ಆ ದೇಶದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಈ ವಿಷಯ ತಿಳಿಸಿರುವ ಎಸ್,ಜೈಶಂಕರ್, ಸಾಂಪ್ರದಾಯಿಕ ಮತ್ತು ಹೊಸ ಯುಗದ ಕಾಲಘಟ್ಟದಲ್ಲಿ ಪ್ರಧಾನಿ ಇಬ್ರಾಹಿಂ ಅವರ ದೂರದೃಷ್ಟಿ, ಭಾರತ-ಮಲೇಷ್ಯಾ ನಡುವಿನ ಸಂಬಂಧಕ್ಕಾಗಿ ಹೆಚ್ಚು ಮಹತ್ವಾಕಾಂಕ್ಷೆಯ ಕಾರ್ಯಸೂಚಿ ರೂಪಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ವಿದೇಶಾಂಗ ಸಚಿವರು ತಮ್ಮ ಮಲೇಷ್ಯಾ ಸಹವರ್ತಿ ಮೊಹಮದ್ ಹಾಜಿ ಹಸನ್ ಅವರೊಂದಿಗೂ ಸಭೆ ನಡೆಸಿದರು. ರಾಜಕೀಯ, ಆರ್ಥಿಕ, ರಕ್ಷಣೆ, ಡಿಜಿಟಲ್, ಸ್ಟಾರ್ಟಪ್, ಕಾನ್ಸುಲರ್ ಮತ್ತು ಪಿ೨ಪಿ ಸಂಪರ್ಕಗಳಲ್ಲಿ ಸಹಯೋಗ ಹೆಚ್ಚಿಸುವ ಕುರಿತು ಅವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.ಇಂಡೋ-ಪೆಸಿಫಿಕ್, ಪಶ್ಚಿಮ ಏಷ್ಯಾ ಮತ್ತು ಉಕ್ರೇನ್ ಬಗ್ಗೆ ಉಭಯ ಸಚಿವರು ದೃಷ್ಟಿಕೋನಗಳನ್ನು ಹಂಚಿಕೊಂಡರು. ಡಾ.ಎಸ್.ಜೈಶಂಕರ್ ಕೌಲಾಲಂಪುರದಲ್ಲಿ ಭಾರತೀಯ ಸಮುದಾಯದೊಂದಿಗೆ ಸಂವಾದ ಕೂಡ ನಡೆಸಿದರು.
<><><><><>
