ಕಂಪಾಲಾ, 20 ಜನವರಿ(ಹಿ.ಸ):
ಆ್ಯಂಕರ್ :
ಸುಧಾರಿತ ವಿಶ್ವಸಂಸ್ಥೆಯೊಂದಿಗೆ ಬಹುಧ್ರುವ ವಿಶ್ವದ ಅಗತ್ಯವಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಕರೆ ನೀಡಿದ್ದಾರೆ. ಉಗಾಂಡಾದ ಕಂಪಾಲಾದಲ್ಲಿ ನಿನ್ನೆ ಸಂಜೆ ನಡೆದ ೧೯ನೇ ನ್ಯಾಮ್ ಶೃಂಗಸಭೆಯಲ್ಲಿ ಭಾರತದ ಹೇಳಿಕೆ ನೀಡಿದ ಸಚಿವರು, ಹೆಚ್ಚಿನ ಪ್ರಾದೇಶಿಕ ಉತ್ಪಾದನೆಯೊಂದಿಗೆ ಆರ್ಥಿಕ ವಿಕೇಂದ್ರೀಕರಣಕ್ಕೆ ಒತ್ತು ನೀಡಿ, ಎಲ್ಲಾ ಪರಂಪರೆಯನ್ನು ಪರಸ್ಪರ ಗೌರವಿಸುವ ಸಾಂಸ್ಕೃತಿಕ ಮರುಸಮತೋಲನಕ್ಕಾಗಿ ಒತ್ತಾಯಿಸಿದರು. ಆಫ್ರಿಕನ್ ಒಕ್ಕೂಟದ ಸದಸ್ಯತ್ವ ಮುನ್ನಡೆಸುವ ಮೂಲಕ ಬದಲಾವಣೆ ಸಾಧ್ಯ ಎಂದು ಭಾರತ ತನ್ನ ಜಿ-೨೦ ಅಧ್ಯಕ್ಷೀಯ ಅವಧಿಯಲ್ಲಿ ತೋರಿಸಿದೆ ಎಂದ ಅವರು, ಇದು ಸುಧಾರಿತ ಬಹುಪಕ್ಷೀಯತೆಯನ್ನು ಪ್ರೇರೇಪಿಸಬೇಕು ಎಂದು ಹೇಳಿದರು. ಪ್ರಾದೇಶಿಕ ಆರ್ಥಿಕ ಕೇಂದ್ರಗಳು, ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳು, ಊಹಿಸಬಹುದಾದ ಚಲನಶೀಲತೆ ಮತ್ತು ವಿಶ್ವಾಸಾರ್ಹ ಡೇಟಾ ಹರಿವುಗಳನ್ನು ರಚಿಸುವುದು ಅತ್ಯಗತ್ಯವಾಗಿದೆ. ಮಹಿಳಾ ನೇತೃತ್ವದ ಅಭಿವೃದ್ಧಿಯಂತೆಯೇ ಆಹಾರ, ಇಂಧನ ಮತ್ತು ಆರೋಗ್ಯ ಭದ್ರತೆಯನ್ನು ಪರಿಹರಿಸುವುದು ಕೂಡ ನಿರ್ಣಾಯಕ ಎಂದು ಅವರು ಹೇಳಿದರು. ಭಯೋತ್ಪಾದನೆ ಮತ್ತು ಒತ್ತೆಯಾಳು ಸ್ವೀಕಾರಾರ್ಹವಲ್ಲ ಎಂಬುದನ್ನು ಜಗತ್ತು ಸ್ಪಷ್ಟಪಡಿಸಬೇಕು. ಅಂತಾರಾಷ್ಟ್ರೀಯ ಮಾನವೀಯ ಕಾನೂನನ್ನು ಎಲ್ಲಾ ರಾಜ್ಯಗಳು ಯಾವಾಗಲೂ ಗೌರವಿಸಬೇಕು ಮತ್ತು ಘರ್ಷಣೆಯು ಪ್ರದೇಶದ ಒಳಗೆ ಅಥವಾ ಅದರಾಚೆಗೆ ಹರಡಬಾರದು ಎಂದು ಡಾ. ಎಸ್. ಜೈಶಂಕರ್ ಹೇಳಿದರು.
ಹಿಂದೂಸ್ತಾನ್ ಸಮಾಚಾರ್
