ದಾರ್ ಎಸ್ ಸಲಾಮ್(ಟಾಂಜಾನಿಯ), 1 ನವೆಂಬರ್ (ಹಿ.ಸ):
ಆ್ಯಂಕರ್ : ದಾರ್ ಎಸ್ ಸಲಾಮ್ ಕಾವೇರಿ ಕನ್ನಡ ಸಂಘ ದ ಕನ್ನಡ ಬಂಧುಗಳು ಇಲ್ಲಿನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಬಾರಿಸು ಕನ್ನಡ ಡಿಂಡಿಮವ ಗೀತೆಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕಿ ಸೌಮ್ಯ ಮಂಜುನಾಥ್ ಚವಾಣ್ ಅವರು ಸಂಘದ ಸದಸ್ಯರಿಗೆ ಸ್ವಾಗತ ಕೋರಿ ಶುಭ ಕೋರಿದ ನಂತರ ಸಂಘದ ಅಧ್ಯಕ್ಷ ಕಲ್ಯಾಣ್ ಕುಮಾರ್ ಅವರು ಕನ್ನಡ ನಾಡು ನುಡಿ, ಹಿರಿಮೆಯನ್ನು ಟಾಂಜಾನಿಯ ದೇಶದಲ್ಲಿ ಅವಿರತವಾಗಿ ಪಸರಿಸುವ ಹೊಣೆ ನಮ್ಮದು. ನಾವೆಲ್ಲರೂ ಜೊತೆಗೂಡಿ ಕನ್ನಡ ನಾಡಿನ ಹಿರಿಮೆ , ಕನ್ನಡ ನೆಲದ ಸಂಸ್ಕೃತಿಯನ್ನು ಆಚರಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ತಿಳಿಸೋಣ ಎಂಬ ಆಶಯ ವ್ಯಕ್ತಪಡಿಸಿದರು .
ಹಿಂದೂಸ್ತಾನ್ ಸಮಾಚಾರ್
