ದಾರ್ ಎಸ್ ಸಲಾಮ್ (ಟಾಂಜಾನಿಯಾ), 27 ನವೆಂಬರ್ (ಹಿ.ಸ):
ಆ್ಯಂಕರ್ : ದಾರ್ ಈ ಸಲಾಮ್ ಟೆಂಪಲ್ ಸ್ಟ್ರೀಟ್ ನ ಭಾಟಿಯಾ ಸಮಾಜ ಆವರಣ ಕನ್ನಡ ರಾಜ್ಯೋತ್ಸವದ ಸಂಬ್ರಮ ಸಡಗರಕ್ಕೆ ಸಾಕ್ಷಿ ಆಯಿತು. ಭಾರತೀಯ ರಾಯಭಾರಿ ಬಿನಾಯ ಎಸ್ ಪ್ರಧಾನ್ ಅವರ ಸಮ್ಮುಖದಲ್ಲಿ ನಡೆದ ನಾಡ ಉತ್ಸವದಲ್ಲಿ ಕನ್ನಡ ನಾಡು ಭಾಷೆ ಮತ್ತು ಸಂಸ್ಕೃತಿಯ ಭವ್ಯ ಪರಂಪರೆ ಕುರಿತ ಕಾರ್ಯಕ್ರಮಗಳು ನಡೆದವು.
ಕರುನಾಡಿನ ಭವ್ಯ ಇತಿಹಾಸ , ಹಂಪಿಯ ಅಮೋಘ ಶಿಲ್ಪ ಕಲೆಯ ಗುಣ ಗಾನ ಮಾಡಿದ ರಾಯಭಾರಿ ಬಿನಾಯ ಎಸ್ ಪ್ರಧಾನ್ ಅವರು, ಕನ್ನಡ ಚಲನ ಚಿತ್ರ ರಂಗದ ಮೇರು ನಟ ರೆಬೆಲ್ ಸ್ಟಾರ್ ಅಂಬರೀಷ್ ಅವರನ್ನು ಸ್ಮರಿಸುತ್ತ, ಅಂಬರೀಷ್ ಕೇವಲ ಕರ್ನಾಟಕಕ್ಕೆ ಮತ್ತು ಕನ್ನಡ ಚಿತ್ರ ರಂಗಕ್ಕೆ ಸೀಮತನಾದ ನಟರಲ್ಲ . ಇಡೀ ಭಾರತೀಯ ಚಲನ ಚಿತ ರಂಗ ಕಂಡ ಅಪರೂಪದ ನಟರಾಗಿದ್ದರು ಎಂದು ಹೇಳಿದರು.
ಬಾಲಚಂದ್ರ ವಿರಚಿತ ಅಂಬರೀಷ್ ದಿಲ್ ದಾರನ ಅಂತ ರಂಗ ಆತ್ಮ ಕಥನದ ಪ್ರತಿಯನ್ನು ಸಂಘದ ಅಧ್ಯಕ್ಷ ಕಲ್ಯಾಣ್ ಕುಮಾರ್ ಅವರಿಗೆ ಹಸ್ತಾಂತರಿಸಿ, ನಟನೆ , ರಾಜಕೀಯ, ಕ್ರೀಡೆ ಇದರ ಸೀಮೆ ದಾಟಿ , ನಾಡಿನ ದಂತ ಕಥೆ ಡಾ ರಾಜ್ ಕುಮಾರ್ ಅವರ ಕನಸಿನ ಕೂಸಾದ ಕನ್ನಡ ಚಲನ ಚಿತ್ರ ಕಲಾವಿದರ ಸಂಘದ ಸ್ವಂತ ಕಟ್ಟಡ ನನಸು ಮಾಡುವ ಶ್ರೇಯಸ್ಸು ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ಸಲ್ಲುತ್ತದೆ. ಇಡೀ ಭಾರತೀಯ ಚಲನ ಚಿತ್ರ ರಂಗಕ್ಕೆ ಇದೊಂದು ಮಾದರಿ . ಸ್ನೇಹ , ಪರೋಪಕಾರ, ನಿಸ್ವಾರ್ಥ ಸೇವೆಗೆ ಮತ್ತೊಂದು ಹೆಸರು ಅಂಬರೀಷ್ ಎಂದು ರೆಬೆಲ್ ಸ್ಟಾರ್ ಅವರ ಆಪ್ತ ಗೆಳೆಯ ಅರ್ ಮಂಜುನಾಥ್ ಚವಾಣ್ ಅವರು ನುಡಿದರು.
ನಾಡಿನ ಕಲೆ ಸಂಸ್ಕೃತಿ ಭಾಷೆಯನ್ನು ಕುರಿತು ಸಂಘದ ಸದಸ್ಯರು ಪ್ರದರ್ಶಿಸಿದ ಕಾರ್ಯ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕನ್ನಡ ಬಂಧುಗಳು ಅಂಬರೀಷ್ ನುಡಿ ನಮನ ಸಲ್ಲಿಸುವುದರೊಂದಿಗೆ ರಾಜ್ಯೋತ್ಸವದ ಸಂಭ್ರಮ ಸಂಪನ್ನವಾಯಿತು.
ಹಿಂದೂಸ್ತಾನ್ ಸಮಾಚಾರ್
