ಮಾಲಿ, 25 ಜನವರಿ(ಹಿ.ಸ):
ಆ್ಯಂಕರ್ :
ಆಫ್ರಿಕಾದಲ್ಲಿ ಚಿನ್ನದ ಗಣಿ ಕುಸಿದು 70 ಜನ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಫ್ರಿಕಾದ ಬಹುದೊಡ್ಡ ರಾಷ್ಟ್ರವಾದ ಮಾಲಿಯಲ್ಲಿ ಕಳೆದ ಜನವರಿ 19 ರಂದು ಘಟನೆ ನಡೆದಿದ್ದು, ಇದೀಗ ಸ್ಥಳೀಯ ಗಣಿ ಅಧಿಕಾರಿ ಒಬ್ಬರು ಮಾಹಿತಿ ನೀಡಿದ್ದಾರೆ.
ಮಾಲಿಯ ಪ್ರಮುಖ ರಫ್ತು ಚಿನ್ನವಾಗಿದ್ದು ಇಂತಹ ಸಾಕಷ್ಟು ಘಟನಗಳು ದಿನಂಪ್ರತಿ ನಡೆಯುತ್ತಿರುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದ್ರೂ ಸರ್ಕಾರ ಸೂಕ್ತ ಕ್ರಮಕೂಗೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಮಾಲಿ ಗಣಿ ಸಚಿವಾಲಯ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು ಗಣಿಗಾರಿಕೆ ಸ್ಥಳದಲ್ಲಿ ವಾಸಿಸುತ್ತಿರುವವರಿಗೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಒಂದು ವಾರದ ಹಿಂದಷ್ಟೇ ತಾಜಂನಿಯಾದಲ್ಲಿ ಸ್ಮಾಲ್-ಸ್ಕೇಲ್ ಗೋಲ್ಡ್ ಮೈನ್ ಕುಸಿದು 22 ಕಾರ್ಮಿಕರು ಸಾವನ್ನಪ್ಪಿದ್ದರು. ಈ ದುರ್ಘಟನೆಗೆ ಮಳೆಯೇ ಕಾರಣ ಎಂದು ಅಲ್ಲಿನ ಸರ್ಕಾರ ತಿಳಿಸಿತ್ತು. ಮೃತರೆಲ್ಲ 24 ರಿಂದ 38 ವರ್ಷದೊಳಗಿನ ಕಾರ್ಮಿಕರು ಎನ್ನಲಾಗಿದೆ.
ಹಿಂದೂಸ್ತಾನ್ ಸಮಾಚಾರ್
