ವಾಷಿಂಗ್ಟನ್, 21 ಡಿಸೆಂಬರ್(ಹಿ.ಸ):
ಆ್ಯಂಕರ್ :
ಮುಂದಿನ ವರ್ಷದ ವರ್ಷಾಂತ್ಯಂಕ್ಕೆ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸದಂತೆ ರಿಪಬ್ಲಿಕನ್ ಪಕ್ಷದ ಟಿಕೆಟ್ ಆಕಾಂಕ್ಷಿ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೊಲರಾಡೋದ ಸುಪ್ರೀಂಕೋರ್ಟ್ ನಿರ್ಬಂಧಿಸಿದೆ.
2021ರಲ್ಲಿ ಅಮೆರಿಕದ ಸಂಸತ್ ಭವನದ ಮೇಲೆ ನಡೆದ ದಾಳಿಗೆ ತಮ್ಮ ಬೆಂಬಲಿಗರಿಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಟ್ರಂಪ್ ವಿರುದ್ಧ ದಾಖಲಿಸಿದ ಪ್ರಕರಣದಲ್ಲಿ ಕೋರ್ಟ್ ಈ ಆದೇಶ ಹೊರಡಿಸಿದೆ. ಅಮೆರಿಕದ ಇತಿಹಾಸದಲ್ಲೇ ಅಭ್ಯರ್ಥಿಯೊಬ್ಬರನ್ನು ಸಂವಿಧಾನದ ವಿಶೇಷ ಕಾಯ್ದೆಯ ಅನ್ವಯ ಈ ರೀತಿ ನಿಷೇಧಿಸಿದ್ದು ಇದೇ ಮೊದಲು. ಈ ನಡುವೆ ಕೊಲರಾಡೋ ಸುಪ್ರೀಂಕೋರ್ಟ್ ಆದೇಶವನ್ನು ದೋಷಪೂರಿತ ಮತ್ತು ಪ್ರಜಾಪ್ರಭುತ್ವ ವಿರೋಧಿ ಎಂದು ಬಣ್ಣಿಸಿರುವ ಟ್ರಂಪ್ ಅವರ ತಂಡ, ಈ ಆದೇಶವನ್ನು ಅಮೆರಿಕ ದೇಶದ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಹೇಳಿದೆ.
ಹಿಂದೂಸ್ತಾನ್ ಸಮಾಚಾರ್
