ಮುಂಬಯಿ, 21 ಜುಲೈ (ಹಿ.ಸ.) :
ಆ್ಯಂಕರ್ : ಬಾಲಿವುಡ್‌ನ ಪ್ರತಿಭಾಶಾಲಿ ಹಾಗೂ ಮನಮೋಹಕ ನಟಿ ತೃಪ್ತಿ ಡಿಮ್ರಿ, ಇತ್ತೀಚೆಗೆ ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಚಿತ್ರದಲ್ಲಿ ರಾಜ್‌ಕುಮಾರ್ ರಾವ್ ಜೊತೆಗೆ ಕಾಣಿಸಿಕೊಂಡಿದ್ದರು. ಈಗ ಅವರು ಧಡಕ್-2 ಎಂಬ ಭಾವನಾತ್ಮಕ ಪ್ರೇಮಕಥಾ ಚಿತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ಜೊತೆ ನಟಿಸುತ್ತಿದ್ದಾರೆ. ಈ ಚಿತ್ರ ಆಗಸ್ಟ್ 1 ರಂದು ಬಿಡುಗಡೆ ಆಗಲಿದೆ.
ಇತ್ತೀಚೆಗೆ ಬಿಡುಗಡೆಗೊಂಡ ಟ್ರೈಲರ್‌ಗೂ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ದೊರೆಯುತ್ತಿದೆ. ಪ್ರೇಮ ಕಥೆಯೊಂದಿಗೆ ಜಾತಿವಾದದಂತಹ ಗಂಭೀರ ಸಾಮಾಜಿಕ ವಿಷಯವನ್ನೂ ಈ ಚಿತ್ರ ಸ್ಪರ್ಶಿಸಿದೆ.
ಧಡಕ್-2 ನನ್ನನ್ನು ಆಂತರಿಕವಾಗಿ ತಲುಪಿದ ಚಿತ್ರ ಎಂದು ತೃಪ್ತಿ ಹೇಳಿದ್ದಾರೆ.
‘ಹಿಂದುಸ್ಥಾನ ಸಮಾಚಾರ ಸುದ್ದಿಸಂಸ್ಥೆ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ತಮ್ಮ ಪಾತ್ರ, ಸಿನೆಮಾ, ವೃತ್ತಿಜೀವನ ಮತ್ತು ವ್ಯಕ್ತಿಗತ ಸಮತೋಲನದ ಕುರಿತು ಮುಕ್ತವಾಗಿ ಮಾತನಾಡಿರು ಸಂಪೂರ್ಣ ವಿವರ ಇಲ್ಲಿದೆ…
ಧಡಕ್-2 ಟ್ರೈಲರ್ ಬಿಡುಗಡೆ ಆದಾಗ ನಾನು ಖುಷಿಯಿಂದಲೂ, ಭಾವನಾತ್ಮಕವಾಗಿಯೂ ಪ್ರತಿಕ್ರಿಯೆ ನೀಡಿದೆ. ಪ್ರೇಕ್ಷಕರ ಪ್ರೀತಿ ನಮಗೆ ಹೆಚ್ಚು ಉತ್ಸಾಹ ನೀಡುತ್ತದೆ. ಈ ಚಿತ್ರದಲ್ಲಿ ನಾನು ಭಿನ್ನವಾದ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಪ್ರತಿಯೊಂದು ಪಾತ್ರಕ್ಕೂ ನನ್ನ ಶತದರ್ಶ ಶ್ರಮ ನೀಡುವುದೇ ನನ್ನ ಧ್ಯೇಯ.
ಚಿತ್ರದ ಕಥೆಯು ಗಂಭೀರವಾದ ಸಾಮಾಜಿಕ ಸಂದೇಶವನ್ನೂ ಹೊತ್ತಿದೆ. ಜಾತಿವಾದವನ್ನು ಎದುರಿಸುವಂತಹ ದೃಶ್ಯಗಳಲ್ಲಿ ನಟಿಸುವಾಗ ಎಮೋಷನಲ್ ಆಗಿ ಒತ್ತಡ ಅನುಭವಿಸಿದ್ದೆ. ಆದರೆ ನಿರ್ದೇಶಕರು ನನಗೆ ಸಾಥ್ ನೀಡಿದರು. ಇಂಥಾ ಪಾತ್ರಗಳು ನಮ್ಮ ಮನಸ್ಸು ಹಾಗೂ ಮನೋಭಾವನೆಗಳ ಮೇಲೆ ಪರಿಣಾಮ ಬೀರುತ್ತವೆ. ಆದರೂ ನಾನು ಪ್ರತಿ ಕ್ಷಣವನ್ನು ಆನಂದಿಸಿದೆ.
ನಾನು ಯಾವಾಗಲೂ ವಿಭಿನ್ನ ಪಾತ್ರಗಳನ್ನು ಹುಡುಕುತ್ತೇನೆ. ಅದೇ ನನ್ನ ಸೃಜನಶೀಲ ಶಕ್ತಿ. ನಾನು ಯಾವತ್ತೂ ಒತ್ತಡದ ಪಾತ್ರಗಳಲ್ಲಿ ಕುಳಿತುಕೊಳ್ಳಲು ಇಚ್ಛಿಸುವುದಿಲ್ಲ. ವೈವಿಧ್ಯತೆಯೇ ನನ್ನ ಇಂಧನವಾಗಿದೆ.
ತಮಗೆ ವೃತ್ತಿ-ಜೀವನ ಸಮತೋಲನದ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರೂ ಹೀಗೆ:
ಹೌದು, ಯಾವುದೇ ವೃತ್ತಿಯಲ್ಲಿಯೂ ಸಮತೋಲನ ಅತ್ಯಗತ್ಯ. ಕೆಲಸದ ಹೊರತಾಗಿಯೂ ನನ್ನ ಕುಟುಂಬ, ಗೆಳೆಯರೊಂದಿಗೆ ಸಮಯ ಕಳೆಯಲು ನಾನು ಪ್ರಯತ್ನಿಸುತ್ತೇನೆ. ಟೆನಿಸ್ ಆಡುವುದು, ಚಿತ್ರಕಲೆ — ಈ ಹವ್ಯಾಸಗಳು ನನ್ನ ಮನಸ್ಸಿಗೆ ಸಮಾಧಾನ ನೀಡುತ್ತವೆ.
ಧಡಕ್-2 ಚಿತ್ರವು ಸಾಮಾಜಿಕ ಜಾಗೃತಿಗೆ ದಾರಿ ಹಾಕಬಹುದೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಯಾವುದೇ ಬದಲಾವಣೆಗೆ ಜ್ಞಾನ ಹಾಗೂ ಅರಿವು ಅವಶ್ಯಕ. ನಮ್ಮ ಚಿತ್ರ ಯಾರನ್ನಾದರೂ ಆಳವಾಗಿ ಯೋಚನೆ ಮಾಡಿಸುವಂತಿದ್ದರೆ, ಅದು ಸಾಕಷ್ಟು ಯಶಸ್ಸು ಎಂದೇ ನನಗೆ ತೋರುತ್ತದೆ. ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
