ಹೈದರಾಬಾದ್, 2 ಜನವರಿ(ಹಿ.ಸ):
ಆ್ಯಂಕರ್ :
ಆರ್ಆರ್ಆರ್’ ಸಿನಿಮಾದ ದೊಡ್ಡ ಗೆಲುವಿನ ಬಳಿಕ ಜೂನಿಯರ್ ಎನ್ಟಿಆರ್ ಅವರು ‘ದೇವರ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರಕ್ಕೆ ಕೊರಟಾಲ ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಇದರ ಜೊತೆಗೆ ಒಂದು ಒಳ್ಳೆಯ ಸುದ್ದಿಯನ್ನು ತಂಡ ನೀಡಿದೆ. ಸಿನಿಮಾದ ಮೊದಲ ಗ್ಲಿಂಪ್ಸ್ ಯಾವಾಗ ರಿಲೀಸ್ ಆಗಲಿದೆ ಎಂದು ತಂಡ ಮಾಹಿತಿ ನೀಡಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಎಲ್ಲ ಕಡೆಗಳಲ್ಲಿ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಹೊಸ ವರ್ಷದ ಸಂದರ್ಭದಲ್ಲಿ ಹಲವು ಸಿನಿಮಾ ತಂಡಗಳು ಹೊಸ ಪೋಸ್ಟರ್ ರಿಲೀಸ್ ಮಾಡುತ್ತಿವೆ. ಅದೇ ರೀತಿ ಜೂನಿಯರ್ ಎನ್ಟಿಆರ್ ಅವರ ನಟನೆಯ ‘ದೇವರ’ ತಂಡ ಕೂಡ ಪೋಸ್ಟರ್ ಬಿಡುಗಡೆ ಮಾಡಿದೆ. ಸಮುದ್ರದ ಮಧ್ಯದಲ್ಲಿ ದೋಣಿಯ ಮೇಲೆ ಜೂನಿಯರ್ ಎನ್ಟಿಆರ್ ನಿಂತಿದ್ದಾರೆ. ಈ ಪೋಸ್ಟರ್ ಗಮನ ಸೆಳೆಯುತ್ತಿದೆ. ಇದರ ಜೊತೆಗೆ ಮೊದಲ ಗ್ಲಿಂಪ್ಸ್ ರಿಲೀಸ್ ಆಗೋದು ಯಾವಾಗ ಎನ್ನುವ ಬಗ್ಗೆಯೂ ತಂಡ ಮಾಹಿತಿ ಹಂಚಿಕೊಂಡಿದೆ. ಜನವರಿ 8ರಂದು ‘ದೇವರ’ ಚಿತ್ರದ ಝಲಕ್ ಸಿಗಲಿದೆ. ಅಂದು ಯಶ್ ಅವರ ಜನ್ಮದಿನ. ‘ಟಾಕ್ಸಿಕ್’ ಚಿತ್ರದಿಂದಲೂ ಗ್ಲಿಂಪ್ಸ್ ರಿಲೀಸ್ ಆಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಮೂಲಕ ಸಿನಿಪ್ರಿಯರಿಗೆ ಒಂದೇ ದಿನ ಎರಡು ಖುಷಿ ಸುದ್ದಿ ಸಿಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್
