ಸ್ಯಾಂಡಲ್ವುಡ್ ಹಾಸ್ಯ ನಟ ಕೋಮಲ್ ಇದೀಗ ಕಾಲಿವುಡ್ ಗೆ ಕಾಲಿಟ್ಟಿದ್ದಾರೆ. ತಮಿಳಿನ ಖ್ಯಾತ ನಟನ ಜೊತೆ ಕೋಮಲ್ ತೆರೆಹಂಚಿಕೊಳ್ತಿದ್ದಾರೆ. ಚಿತ್ರದ ಅಪ್ ಡೇಟ್ ಶೇರ್ ಮಾಡಿ ಕೋಮಲ್ ಸಂಭ್ರಮಿಸಿದ್ದಾರೆ. ತಮಿಳು ಸಿನಿಮಾದ ಚಿತ್ರೀಕರಣದ ತುಣುಕು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಹಾಸ್ಯ ನಟನಾಗಿ ಪರಿಚಿತರಾಗಿ ಇದೀಗ ನಾಯಕ ನಟನಾಗಿ ಸ್ಯಾಂಡಲ್ ವುಡ್ ನಲ್ಲಿ ಕೋಮಲ್ ಮೋಡಿ ಮಾಡ್ತಿದ್ದಾರೆ. ಇದರ ನಡುವೆ ಕಾಲಿವುಡ್ ಸಿನಿಮಾದಲ್ಲಿ ನಟಿಸುವ ಆಫರ್ ಸಿಕ್ಕಿದೆ. ಚಿತ್ರವೊಂದರಲ್ಲಿ ತಮಿಳು ಲೆಜೆಂಡರಿ ಆ್ಯಕ್ಟರ್ ಶಿವಾಜಿ ಗಣೇಶನ್ ಪುತ್ರ ಪ್ರಭು ಜೊತೆ ಕೋಮಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಶೂಟಿಂಗ್ ಸೆಟ್ ನಲ್ಲಿ ನಟ ಪ್ರಭು ಜೊತೆ ಮಾತನಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿ ಪ್ರಭು ಜೊತೆ ತೆರೆಹಂಚಿಕೊಳ್ತಿರೋದು ಖುಷಿ ಕೊಟ್ಟಿದೆ ಎಂದು ಕೋಮಲ್ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಇದು ನನ್ನ ಮೊದಲ ತಮಿಳು ಸಿನಿಮಾ ಎಂದಿದ್ದಾರೆ
