ಹಂಪಿ , 2 ಫೆಬ್ರವರಿ (ಹಿ.ಸ):
ಆ್ಯಂಕರ್ : ಮನದಲ್ಲಿ ವಿರುಪಾಕ್ಷನ ನೆನೆಯುತ್ತಾ ಕಾಲಿಗೆ ಗೆಜ್ಜೆ ಕಟ್ಟಿ, ಕೈಯಲ್ಲಿ ಕೋಲು ಹಿಡಿದು ಹಲಗೆ ಸದ್ದಿಗೆ ಕುಣಿದು ಪ್ರದರ್ಶಿಸಿದ ಕೋಲಾಟ ಎಲ್ಲರ ಗಮನಸೆಳೆಯಿತು.
ಸಂಜೆ ವೇಳೆ ಹಂಪಿಯ ವಿರೂಪಾಕ್ಷ ದೇವಸ್ಥಾನದ ಮುಂಭಾಗದಲ್ಲಿ ಗ್ರಾಮೀಣ ಭಾಗದ ಜನರು ಕೋಲಾಟ ಪ್ರದರ್ಶಿಸಿದರು. ಯುವಕರ ಜೊತೆ ಮಕ್ಕಳು ಹಾಗೂ ಯುವಕರು ನಾಚುವಂತೆ ಅಜ್ಜಂದಿರು ಸಹ ಕೋಲಾಟಕ್ಕೆ ಹೆಜ್ಜೆಗೆ ಹಾಕಿದರು.
