ಮುಂಬೈ, 13 ಫೆಬ್ರವರಿ :
ಆ್ಯಂಕರ್ : ನೀಲಿ ಚಿತ್ರ ತಾರೆ ಜಾನಿ ಸಿನ್ಸ್ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಇಬ್ಬರೂ ಒಟ್ಟಾಗಿ ಜಾಹೀರಾತು ಒಂದರಲ್ಲಿ ನಟಿಸಿದ್ದರು. ಧಾರಾವಾಹಿಯ ಶೈಲಿಯಲ್ಲಿ ಈ ಜಾಹೀರಾತು ಮೂಡಿ ಬಂದಿತ್ತು. ಈ ಜಾಹೀರಾತಿಗೆ ಕಿರುತೆರೆ ಕಲಾವಿದರು ಅಪಸ್ವರ ತೆಗೆದಿದ್ದಾರೆ. ಇದು ‘ಕಿರುತೆರೆಗೆ ಮಾಡಿದ ಅವಮಾನ’ ಎಂದು ಅನೇಕರು ಹೇಳಿದ್ದಾರೆ. ಧಾರಾವಾಹಿ ನಟಿ ರಶ್ಮಿ ದೇಸಾಯಿ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ‘ಅವಮಾನ ಮಾಡಿದಂತೆ ಭಾಸವಾಯಿತು’ ಎಂದು ಹೇಳಿದ್ದಾರೆ.
ಜಾಹಿರಾತಿನಲ್ಲಿ ಏನಿದೆ?
ಪತಿ-ಪತ್ನಿ ಮಧ್ಯೆ ಜಗಳ ಆಗುತ್ತದೆ. ಪತ್ನಿ ಮನೆ ಬಿಟ್ಟು ಹೋಗುವ ನಿರ್ಧಾರಕ್ಕೆ ಬರುತ್ತಾಳೆ. ಲೈಂಗಿಕವಾಗಿ ಪತಿ ಉತ್ಸಾಹ (ಆ್ಯಕ್ಟೀವ್) ಆಗಿಲ್ಲ ಎಂಬುದೇ ಪತ್ನಿಯು ಮನೆ ಬಿಟ್ಟು ಹೋಗಲು ಕಾರಣ. ನಂತರ ಮಾತ್ರೆ ಒಂದನ್ನು ತೆಗೆದುಕೊಂಡ ಬಳಿಕ ಪತಿ ಬದಲಾಗುತ್ತಾನೆ. ಇದನ್ನು ಧಾರಾವಾಹಿಯ ಕಥೆ ರೀತಿಯಲ್ಲಿ ತೋರಿಸಲಾಗಿದೆ. ತಯಾರಿಕೆ (ಮೇಕಿಂಗ್) ಕೂಡ ಹಾಗೆಯೇ ಇದೆ. ಜಾನಿ ಸಿನ್ಸ್ ಹಾಗೂ ರಣವೀರ್ ಸಿಂಗ್ ಇಬ್ಬರೂ ಒಟ್ಟಾಗಿ ನಟಿಸಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಟ್ರೆಂಡ್ ಆರಂಭಿಸಿದ್ದಾರೆ. ಈ ಜಾಹಿರಾತಿನ ಮೇಲೆ ಬ್ಯಾನ್ ಹೇರಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. ಈ ಮೊದಲು ಅನೇಕ ಜಾಹೀರಾತುಗಳು ಬ್ಯಾನ್ ಆದ ಉದಾಹರಣೆ ಇದೆ. ಆ ಸಾಲಿಗೆ ಈ ಅಡ್ವಟೈಸ್ಮೆಂಟ್ ಕೂಡ ಸೇರ್ಪಡೆ ಆಗುತ್ತದೆಯೇ ಎನ್ನುವ ಕುತೂಹಲ ಮೂಡಿದೆ.
