ಹೈದರಾಬಾದ್, 15 ಜನವರಿ(ಹಿ.ಸ):
ಆ್ಯಂಕರ್ :
ಸಂಕ್ರಾಂತಿ ಬಂತೆಂದರೆ ತೆಲುಗು ಚಿತ್ರರಂಗದಲ್ಲಿ ಗದ್ದಲ ಸೃಷ್ಟಿಯಾಗುತ್ತದೆ. ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ಕಾಯುತ್ತಿರುತ್ತಾರೆ. ಪ್ರತಿ ಬಾರಿ ಸಂಕ್ರಾಂತಿ ಬಂದಾಗಲು ದೊಡ್ಡ ಸ್ಟಾರ್ಗಳ ಸಿನಿಮಾಗಳ ನಡುವೆ ಬಾಕ್ಸ್ ಆಫೀಸ್ ಸ್ಪರ್ಧೆ ಏರ್ಪಡುತ್ತದೆ. ಪ್ರತಿ ಬಾರಿಯೂ ಕೆಲವರಿಗೆ ನಷ್ಟ ಮಾಮೂಲು. ಈ ಬಾರಿ ಹಾಗಾಗದಂತೆ ತಡೆಯಲು ತೆಲುಗು ಸಿನಿಮಾ ನಿರ್ಮಾಪಕರ ಸಂಘ ಪ್ರಯತ್ನಿಸಿತಾದರೂ ವಿಫಲವಾಯ್ತು. ಇದು ‘ಹನುಮಾನ್’ ಸಿನಿಮಾ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ದಿಲ್ ರಾಜು ನಡುವೆ ವಿವಾದಕ್ಕೆ ಕಾರಣವಾಯ್ತು.
ಈ ಬಾರಿ ಸಂಕ್ರಾಂತಿಗೆ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’, ‘ಹನುಮಾನ್’, ವೆಂಕಟೇಶ್ ನಟನೆಯ ‘ಸೈಂಧವ’, ನಾಗಾರ್ಜುನ ನಟನೆಯ ‘ನಾ ಸಾಮಿ ರಂಗ’ ಸಿನಿಮಾಗಳು ಬಿಡುಗಡೆ ಆಗಿವೆ. ಈ ನಾಲ್ಕು ಸಿನಿಮಾಗಳು ಕೇವಲ ಮೂರು ದಿನದ ಅಂತರದಲ್ಲಿ ಬಿಡುಗಡೆ ಆಗಿವೆ. ‘ಹನುಮಾನ್’ ಸಿನಿಮಾದ ಬಿಡುಗಡೆಯನ್ನು ಮುಂದೂಡಲು ನಿರ್ಮಾಪಕರ ಸಂಘದ ಅಧ್ಯಕ್ಷ, ಸ್ವತಃ ಬಿಗ್ ಬಜೆಟ್ ನಿರ್ಮಾಪಕರಾಗಿರುವ ದಿಲ್ ರಾಜು ಪ್ರಯತ್ನಿಸಿ ವಿಫಲವಾದರು.
‘ಹನುಮಾನ್’ ಸಿನಿಮಾ ಮೊದಲು ಘೋಷಿಸಿದ್ದ ದಿನಾಂಕದಂದೆ ಬಿಡುಗಡೆ ಆಯ್ತು. ಆದರೆ ಆ ಸಿನಿಮಾಕ್ಕೆ ಕೆಲ ಭಾಗಗಳಲ್ಲಿ ಮೋಸಲಾಗಿದ್ದು ಇದರಿಂದ ಭಾರಿ ನಷ್ಟ ಅನುಭವಿಸಿದೆ. ‘ಹನುಮಾನ್’ ಸ್ಟಾರ್ ನಟನ ಸಿನಿಮಾ ಅಲ್ಲದ ಕಾರಣ, ಅಡ್ವಾನ್ಸ್ ನೀಡಿ ಚಿತ್ರಮಂದಿರಗಳನ್ನು ನಿರ್ಮಾಪಕರು ಬುಕ್ ಮಾಡಿದ್ದರು. ಅಂತೆಯೇ ನಿಜಾಂ ಏರಿಯಾನಲ್ಲಿ ಹಲವು ಚಿತ್ರಮಂದಿರಗಳಿಗೆ ಅಡ್ವಾನ್ಸ್ ನೀಡಿ ಬುಕ್ ಮಾಡಲಾಗಿತ್ತು. ಆದರೆ ಅಡ್ವಾನ್ಸ್ ಪಡೆದ ಕೆಲವು ಚಿತ್ರಮಂದಿರಗಳು ‘ಹನುಮಾನ್’ ಸಿನಿಮಾ ಪ್ರದರ್ಶಿಸದೆ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ ಪ್ರದರ್ಶಿಸಿವೆ.
ಹಿಂದೂಸ್ತಾನ್ ಸಮಾಚಾರ್
