
ಬಳ್ಳಾರಿ, 15 ನವೆಂಬರ್ (ಹಿ.ಸ):
ಆ್ಯಂಕರ್ : ತೆಲುಗಿನ ಚಿತ್ರನಟರಾದ ಕೃಷ್ಣ ಮತ್ತು ಮಹೇಶ್ ಬಾಬು ಅಸೋಸಿಯೇಷನ್ ಬಳ್ಳಾರಿಯಲ್ಲಿ ಖ್ಯಾತ ನಟ ಸೂಪರ್ ಸ್ಟಾರ್ ಕೃಷ್ಣ ಅವರ ಒಂದನೆಯ ವರ್ಷದ ಪುಣ್ಯತಿಥಿಯನ್ನು ಅನ್ನದಾನ ಮಾಡುವ ಮೂಲಕ ಬುಧವಾರ ಆಚರಿಸಲಾಯಿತು.
ಖ್ಯಾತ ನಟ ಸೂಪರ್ ಸ್ಟಾರ್ ಕೃಷ್ಣ ಅವರ ಅಭಿಮಾನಿಗಳು ಕೃಷ್ಣ ಅವರ ಭಾವಚಿತ್ರಕ್ಕೆ ಪೂಜೆ ಮಾಡಿ, ಹಾರಹಾಕಿ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.
ಸೂಪರ್ ಸ್ಟಾರ್ ಮಹೇಶ್ ಬಾಬು ಫ್ಯಾನ್ಸ್ ಅಸೋಸಿಯೇಷನ್ ಅಧ್ಯಕ್ಷ ಡಿ. ರಾಘವ ರಮೇಶ್, ಸಾಯಿ ಕ್ಯಾಟರಿಂಗ್ನ ರವಿಶಂಕರ್ ಇನ್ನಿತರರು ಉಪಸ್ಥಿತರಿದ್ದರು. ಅನೇಕರಿಗೆ ಅನ್ನದಾನ ಮಾಡಲಾಯಿತು.
