ಮುಂಬೈ , 12ನವೆಂಬರ್ (ಹಿ.ಸ):
ಆ್ಯಂಕರ್ :
ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಸಿನಿಮಾ ಇಂದು (ನವೆಂಬರ್ 12) ರಿಲೀಸ್ ಆಗಿದೆ. ಸಂಪ್ರದಾಯವನ್ನು ಬಿಟ್ಟು ಯಶ್ ರಾಜ್ ಫಿಲ್ಮ್ಸ್ ಅವರು ಭಾನುವಾರ ಸಿನಿಮಾ ರಿಲೀಸ್ ಮಾಡಿದ್ದಾರೆ. ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಕತ್ರಿನಾ ಕೈಫ್ ನಾಯಕಿ ಆಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಹಾಗೂ ಹೃತಿಕ್ ರೋಷನ್ ಅತಿಥಿ ಪಾತ್ರ ಮಾಡಿದ್ದಾರೆ. ಈ ಸಿನಿಮಾ ನೋಡಿದ ಅನೇಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
‘ಟೈಗರ್ 3’ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ ಅನ್ನೋದು ಟ್ರೇಲರ್ ನೋಡಿದ ಅನೇಕರಿಗೆ ಗೊತ್ತಾಗಿತ್ತು. ಸಿನಿಮಾದಲ್ಲೂ ಅದು ಮುಂದುವರಿದಿದೆ. ಅನೇಕರಿಗೆ ಸಿನಿಮಾ ಇಷ್ಟವಾಗಿದೆ. ಇದನ್ನು ಬ್ಲಾಕ್ಬಸ್ಟರ್ ಎಂದು ಕರೆದಿದ್ದಾರೆ. ಇನ್ನೂ ಕೆಲವರು ಸಿನಿಮಾ ಚೆನ್ನಾಗಿಲ್ಲ ಎಂದಿದ್ದಾರೆ.
ಒಂದೇ ಮಾತಲ್ಲಿ ಹೇಳಬೇಕೆಂದರೆ ಬ್ಲಾಕ್ಬಸ್ಟರ್. ‘ಟೈಗರ್ 3’ ದೀಪಾವಳಿ ವಿನ್ನರ್. ನಿರ್ದೇಶಕ ಮನೀಶ್ ಶರ್ಮ ಅವರು ನಮ್ಮನ್ನು ಇಂಪ್ರೆಸ್ ಮಾಡಿದ್ದಾರೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಇದೇ ಕೊನೆ ಅಲ್ಲ. ಈ ಯೂನಿವರ್ಸ್ನಲ್ಲಿ ಇನ್ನೂ ಕೆಲವು ಚಿತ್ರಗಳು ಬರೋದು ಇದೆ. ಆದರೆ, ಏನಿದು ಸಿನಿಮಾ? ಬೋರಿಂಗ್ ಆ್ಯಕ್ಷನ್ ದೃಶ್ಯ, ಕಥೆ ಅಂತೂ ಕೇಳೋದೇ ಬೇಡ’ ಎಂದು ಕೆಲವರು ಬರೆದುಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
