ಹೈದರಾಬಾದ್ , 14 ಡಿಸೆಂಬರ್(ಹಿ.ಸ):
ಆ್ಯಂಕರ್ :ನಿರ್ದೇಶಕ ರಾಜಮೌಳಿ ಹಾಗೂ ಪ್ರಭಾಸ್ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇಬ್ಬರೂ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಪ್ರಭಾಸ್ಗೆ ‘ಬಾಹುಬಲಿ’ ಸರಣಿ ಮೂಲಕ ದೊಡ್ಡ ಗೆಲುವು ತಂದುಕೊಟ್ಟಿದ್ದು ಇದೇ ರಾಜಮೌಳಿ. ಹೀಗಾಗಿ ಅವರ ಮೇಲೆ ಪ್ರಭಾಸ್ಗೆ ವಿಶೇಷ ಗೌರವ. ರಾಜಮೌಳಿ ಅವರು ಪ್ರಭಾಸ್ನ ಶಿಷ್ಯ ಎಂದೇ ಪರಿಗಣಿಸಿದ್ದಾರೆ. ಈಗ ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಪ್ರಚಾರದಲ್ಲಿ ರಾಜಮೌಳಿ ಕೂಡ ಭಾಗಿ ಆಗಲಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಪ್ರಭಾಸ್ ನಟನೆಯ ‘ಬಾಹುಬಲಿ 2’ ರಿಲೀಸ್ ಆಗಿ ಹಲವು ವರ್ಷಗಳು ಕಳೆದಿವೆ. ಇದಾದ ಬಳಿಕ ಅವರ ನಟನೆಯ ಮೂರು ಚಿತ್ರಗಳು ರಿಲೀಸ್ ಆದವು. ಆದರೆ, ಯಾವ ಚಿತ್ರದಲ್ಲೂ ಅವರಿಗೆ ಗೆಲುವು ಸಿಗಲಿಲ್ಲ. ಇದು ಪ್ರಭಾಸ್ಗೆ ಬೇಸರ ತರಿಸಿದೆ. ‘ಸಲಾರ್’ ಮೂಲಕ ಗೆಲುವು ಪಡೆಯಲೇಬೇಕು ಎನ್ನುವ ಹಠಕ್ಕೆ ಪ್ರಭಾಸ್ ಬಿದ್ದಿದ್ದಾರೆ. ಇದಕ್ಕೆ ರಾಜಮೌಳಿ ಕೂಡ ಸಾಥ್ ನೀಡುತ್ತಿದ್ದಾರೆ. ಶಿಷ್ಯನ ಸಿನಿಮಾ ಪ್ರಚಾರ ಮಾಡಲು ರಾಜಮೌಳಿ ಸಹಾಯ ಮಾಡುತ್ತಿದ್ದಾರೆ.
ಹಾಗಂತ ರಾಜಮೌಳಿ ಅವರು ತಂಡದ ಜೊತೆ ತೆರಳಿ ವೇದಿಕೆ ಹತ್ತುತ್ತಿಲ್ಲ. ಬದಲಿಗೆ, ಪ್ರಭಾಸ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಟ ಪೃಥ್ವಿರಾಜ್ ಸುಕುಮಾರನ್ ಅವರನ್ನು ರಾಜಮೌಳಿ ಸಂದರ್ಶನ ಮಾಡಲಿದ್ದಾರೆ. ಇದನ್ನು ಯೂಟ್ಯೂಬ್ನಲ್ಲಿ ಹಂಚಿಕೊಳ್ಳಲು ಹೊಂಬಾಳೆ ಫಿಲ್ಮ್ಸ್ ಮುಂದಾಗಿದೆ. ಈ ವೇಳೆ ಸಿನಿಮಾ ಕುರಿತ ಆಸಕ್ತಿಕರ ವಿಚಾರಗಳು ರಿವೀಲ್ ಆಗಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಈ ಮೊದಲು ‘ರಾಧೆ ಶ್ಯಾಮ್’ ರಿಲೀಸ್ ಸಂದರ್ಭದಲ್ಲೂ ಪ್ರಭಾಸ್ ಅವರನ್ನು ರಾಜಮೌಳಿ ಸಂದರ್ಶನ ಮಾಡಿದ್ದರು.
ಹಿಂದೂಸ್ತಾನ್ ಸಮಾಚಾರ್
