ಚೆನ್ನೈ, 28 ಡಿಸೆಂಬರ್(ಹಿ.ಸ):
ಆ್ಯಂಕರ್ :ನಟ ಹಾಗೂ ಡಿಎಂಡಿಕೆ ಮುಖ್ಯಸ್ಥ ವಿಜಯಕಾಂತ್ಅ ವರು 71ನೇ ವಯಸ್ಸಿಗೆ ನಿಧನ ಹೊಂದಿದ್ದಾರೆ. ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ಕೆಲ ದಿನಗಳಿಂದ ಅವರು ವೆಂಟಿಲೇಟರ್ ಸಹಾಯದಲ್ಲಿ ಇದ್ದರು. ಈಗ ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತಪಟ್ಟಿದ್ದಾರೆ. ‘ವಿಜಯಕಾಂತ್ ಅವರನ್ನು ವೆಂಟಿಲೇಟರ್ ಸಹಾಯದಲ್ಲಿ ಇಡಲಾಗಿತ್ತು. ಆದರೆ, ಎಷ್ಟೇ ಪ್ರಯತ್ನಿಸಿದರೂ ಅವರನ್ನು ಬದುಕಿಸಲು ಸಾಧ್ಯವಾಗಿಲ್ಲ. ಡಿಸೆಂಬರ್ 28ರ ಬೆಳಿಗ್ಗೆ ಅವರು ನಿಧನ ಹೊಂದಿದರು’ ಎಂದು ಆಸ್ಪತ್ರೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
