ಬರೋಬ್ಬರಿ ಒಂದು ತಿಂಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಕೊನೆಗೂ ಬೆಂಗಳೂರಿಗೆ ಬಂದಿದ್ದಾರೆ. ಜರ್ಮನಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಕೂಡಲೇ ಎಸ್‌ಐಟಿ ಪೊಲೀಸರು ಭಾರೀ ಬಿಗಿ ಬಂದೋಬಸ್ತ್ ನಡುವೆಯೇ ಅವರನ್ನು ಬಂಧಿಸಿದ್ದಾರೆ.
BulletsIn
- ಪ್ರಜ್ವಲ್ ರೇವಣ್ಣ ಒಂದು ತಿಂಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರು.
- ಜರ್ಮನಿಯಿಂದ ಬೆಂಗಳೂರಿಗೆ ಲುಫ್ತಾನ್ಸಾ ಏರ್ಲೈನ್ಸ್ ಫ್ಲೈಟ್ ಮೂಲಕ ಬಂದರು.
- 40 ಕೆಜಿ ಗಂಟು ಮೂಟೆ ಮತ್ತು ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಹೊಂದಿದ್ದರು.
- ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್ಗೆ ಬಂದ ಕೂಡಲೇ ಬಂಧನ.
- ವಿಮಾನದಲ್ಲೇ 1 ಗಂಟೆ ಸುದೀರ್ಘ ಪ್ರಕ್ರಿಯೆ ನಡೆಯಿತು.
- ಫ್ಲೈಟ್ ಹತ್ತಿದ ಕೂಡಲೇ ಎಲ್‌ಒಸಿ ಇಂಟಿಮೇಷನ್ ಬಂದಿತ್ತು.
- ಬ್ಯೂರೋ ಆಫ್ ಇಮಿಗ್ರೇಶನ್ ಮೂಲಕ ಸೆಕ್ಯೂರಿಟಿ ಟೀಂಗೆ ಮಾಹಿತಿ ರವಾನೆ.
- ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆ ಎಸ್‌ಐಟಿ ಅಧಿಕಾರಿಗಳು ಬಂಧಿಸಿದರು.
- ಏರ್ಪೋರ್ಟ್ನಿಂದ ಕರೆ ತರುವ ಪ್ರಕ್ರಿಯೆ ನಡೆಯುತ್ತಿದೆ.
- ಪ್ರಜ್ವಲ್ ರೇವಣ್ಣ ಎಸ್ಐಟಿ ಕಸ್ಟಡಿಯಲ್ಲಿ ಇರ್ತಾರಾ ಅಥವಾ ನೇರ ಜೈಲಿಗಾ ಅನ್ನೋದು ಕೋರ್ಟ್ ನಿರ್ಧಾರ.
