ಮಂಗಳೂರು, 15 ಫೆಬ್ರವರಿ :
ಆ್ಯಂಕರ್: ಚಲಿಸುತ್ತಿದ್ದ ರೈಲಿನಿಂದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳದ ಬಳಿ ನಡೆದಿದೆ. ನೇತ್ರಾವತಿ ನದಿಗೆ ಹಾರಿ ನಯನಾ ಎಂ.ಜಿ (27 ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತುಮಕೂರಿನ ಮಧುಗಿರಿ ನಿವಾಸಿ ನಯನಾ ಎಂ.ಜಿ ಬೆಂಗಳೂರಿನಿಂದ ಮಂಗಳೂರಿಗೆ ಹೊರಟ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಬಂಟ್ವಾಳ ಸಮೀಪ ಹಾದು ಹೋಗುವ ನೇತ್ರಾವತಿ ಸೇತುವೆ ಬಂದಂತೆ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮುಳುಗುತಜ್ಞ ಮಹಮ್ಮದ್ ತಂಡ ನದಿಯಿಂದ ನಯನಾ ಎಂ.ಜಿಯವರ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
