ಬಳ್ಳಾರಿ, 6 ನವೆಂಬರ್ (ಹಿ.ಸ):
ಆ್ಯಂಕರ್ : ಬಳ್ಳಾರಿ ನಗರದ ಬಗೀಚಾ ಹೋಟೆಲ್ ಪಕ್ಕದ ರಸ್ತೆಯಲ್ಲಿ ಸಾವಿತ್ರಿಬಾಯಿ (೮೨) ಅವರು ಒಬ್ಬರೇ ಇದ್ದಾಗ ವಿವಾಹ ಮಹೋತ್ಸವದ ಕಾಡ್೯ ಕೊಡುವ ನೆಪದಲ್ಲಿ ಚಾಕು ತೋರಿಸಿ ವೃದ್ಧೆಯಿಂದ ೨೫-೨೮ ತೊಲ ಬಂಗಾರವನ್ನು ದೋಚಿ ಪರಾರಿಯಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಅಮರಾವತಿ ನಿವಾಸಿ ಸೆಲ್ವಕುಮಾರ್ (೪೩) ಮತ್ತು ಬಳ್ಳಾರಿ ನಿವಾಸಿ ಶ್ರೀಕಾಂತ (೪೪).
ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ, ಬಂಧಿತರಿಂದ ೧೪೭ ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
