
ಬಳ್ಳಾರಿ, 14 ಜನವರಿ(ಹಿ.ಸ):
ಆ್ಯಂಕರ್ : ಗುಗ್ಗರಹಟ್ಟಿ ಬಳಿಯ ಭಾರತ್ ಬಿಸ್ಕೇಟ್ ಫ್ಯಾಕ್ಟರಿಯಲ್ಲಿ ಭಾನುವಾರ ಸಂಜೆ ಬಾಯ್ಲರ್ ಸ್ಪೋಟಗೊಂಡು ಓರ್ವ ಕಾರ್ಮಿಕನು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆರು ಕಾರ್ಮಿಕರು ಗಾಯಗೊಂಡಿದ್ದು ವಿಮ್ಸ್ನಲ್ಲಿ ಎಲ್ಲರೂ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಮೃತನು ಸಲೀಂ. ಬಾಯ್ಲರ್ ಸ್ಪೋಟದ ಘಟನೆಯಲ್ಲಿ ಮತ್ತೊಬ್ಬ ಕಾರ್ಮಿಕನ ಸ್ಥಿತಿಯು ಗಂಭೀರವಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರುವ ವಿಮ್ಸ್ ವೈದ್ಯರ ಪ್ರಕಾರ, ಗಾಯಗೊಂಡಿರುವ ಆರು ಕಾರ್ಮಿಕರ ಪೈಕಿ ಒಂದಿಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಬಳ್ಳಾರಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
