ಕೊಪ್ಪಳ, 20 ನವೆಂಬರ್ (ಹಿ.ಸ):
ಆ್ಯಂಕರ್: ಕೊಪ್ಪಳ ತಾಲ್ಲೂಕಿನ ಚಿಕ್ಕಸಿಂಧೋಗಿ ಗ್ರಾಮದ ಶಂಕರಲಿಂಗ ಮರಿಯಪ್ಪ ಕುರಿಯರ್(24 ) ಮೇ 07 ರಿಂದ ಕಾಣೆಯಾಗಿದ್ದು, ಈ ಕುರಿತು ಅಳವಂಡಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.49/2023 ರ ಕಲಂ ಮನುಷ್ಯ ಕಾಣೆ ಅಡಿ ಪ್ರಕರಣ ದಾಖಲಾಗಿದೆ.
ಯುವಕನ ಚಹರೆ:
ತೆಳುವಾದ ಮೈಕಟ್ಟು, ಕೋಲು ಮುಖ, ಗೋಧಿ ಮೈಬಣ್ಣ, 5.2 ಅಡಿ ಎತ್ತರ ಇರುತ್ತಾನೆ. ಕಾಣೆಯಾದಾಗ ಬಿಳಿ ಬಣ್ಣದ ತುಂಬು ತೋಳಿನ ಅಂಗಿ, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದನು. ಕನ್ನಡ ಭಾಷೆ ಮಾತನಾಡುತ್ತಾನೆ.
ಮೇಲ್ಕಂಡ ಚಹರೆಯ ಯುವಕನ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಕೊಪ್ಪಳ ಎಸ್ಪಿ: 08539-230111, ಡಿವೈಎಸ್ಪಿ: 08539-230342, ಸಿಪಿಐ(ಗ್ರಾ): 08539-231333, ಅಳವಂಡಿ ಪಿಎಸ್ಐ: 08539-285233, ಜಿಲ್ಲಾ ಕಂಟ್ರೋಲ್ ರೂಂ: 08539-230222, 100 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಅಳವಂಡಿ ಪೊಲೀಸ್ ಠಾಣೆ ತಿಳಿಸಿದೆ.
