
ಸೂರತ್, 24 ಡಿಸೆಂಬರ್(ಹಿ.ಸ):
ಆ್ಯಂಕರ್ :
ನಾಲ್ಕು ದ್ವಿಚಕ್ರ ವಾಹನಗಳು ಎರಡು ಬಸ್ಗಳ ನಡುವೆ ಸಿಲುಕಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು ಹಲವರು ಗಾಯಗೊಡಿದ್ದಾರೆ. ಈ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ. ಅಪಘಾತ ಸಂಭವಿಸಿದ ರಸ್ತೆಯುದ್ದಕ್ಕೂ ವಾಹನ ದಟ್ಟಣೆ ಉಂಟಾಗಿತ್ತು. ರಸ್ತೆಯಲ್ಲಿ ಎರಡು ಬಿಆರ್ಟಿಎಸ್ ಬಸ್ಗಳು ಸಂಚರಿಸುತ್ತಿದ್ದು, ಅವುಗಳ ನಡುವೆ ನಾಲ್ಕು ದ್ವಿಚಕ್ರ ವಾಹನಗಳು ಸಿಲುಕಿಕೊಂಡಿದ್ದವು.
ಮುಂದೆ ಬಸ್ ಬ್ರೇಕ್ ಹಾಕಿದ್ದು, ಎರಡನೇ ಬಸ್ ಡಿಕ್ಕಿ ಹೊಡೆದಿದ್ದು, ದ್ವಿಚಕ್ರ ವಾಹನಗಳು ಮತ್ತು ಎಂಟು ಮಂದಿ ನಜ್ಜುಗುಜ್ಜಾಗಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ ಪಿನಾಕಿನ್ ಪರ್ಮಾರ್ ಹೇಳಿದ್ದಾರೆ
ಎರಡನೇ ಬಸ್ಗೆ ಹಿಂದಿನಿಂದ ಆಟೋರಿಕ್ಷಾ ಡಿಕ್ಕಿ ಹೊಡೆದಿದೆ. ಚಾಲಕನನ್ನು (ಎರಡನೇ ಬಸ್ಸಿನ) ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಗಾಯಾಳುಗಳನ್ನು ಹತ್ತಿರದ ಎರಡು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಇದುವರೆಗೆ ಬಂದಿರುವ ಮಾಹಿತಿಯ ಪ್ರಕಾರ, ಇಬ್ಬರು ಸಾವನ್ನಪ್ಪಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
