ವಿಜಯಪುರ, 21 ಆಗಸ್ಟ್ (ಹಿ.ಸ.) :
ಆ್ಯಂಕರ್ : ಅಕ್ರಮವಾಗಿ ನಾನಾ ಯೋಜನೆಯ ಅಕ್ಕಿಯನ್ನು ಸಂಗ್ರಹಿಸಿ ಸಾಗಾಟ ಮಾಡುವಾಗ ಪೊಲೀಸರು ಹಾಗೂ ಆಹಾರ ನೀರಿಕ್ಷಕರು ಜಂಟಿಯಾಗಿ ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಅರ್ಜನಾಳ ರಸ್ತೆಯಲ್ಲಿ ನಡೆದಿದೆ.
ಅರ್ಶದ ದಂಡೆವಾಲೆ ಹಾಗೂ ಹುಸೇನ್ ಟಪಾಲ ಬಂಧಿತರು. ಬಂಧಿತ ಆರೋಪಿಗಳಿಂದ 10 ಲಕ್ಷ ಮೌಲ್ಯದ ಗೂಡ್ಸ್ ಲಾರಿ ಹಾಗೂ 3,39,640 ಮೌಲ್ಯದ 12130 ಕೆಜಿ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande
