
ಬೆಂಗಳೂರು, 23 ನವೆಂಬರ್ (ಹಿ.ಸ):
ಆ್ಯಂಕರ್ :ಸಹಕಾರದಿಂದ ಸಮೃದ್ಧಿ ದೃಷ್ಟಿಕೋನವನ್ನು ಸಾಕಾರಗೊಳಿಸಲು ರಾಷ್ಟ್ರೀಯ ಸಹಕಾರ ನೀತಿಯನ್ನು ರೂಪಿಸಿದ್ದು, ಇದಕ್ಕೆ ಸಂಬಂಧಿಸಿದ ದಕ್ಷಿಣ ವಲಯದ ಕಾರ್ಯಾಗಾರ ಬೆಂಗಳೂರಿನಲ್ಲಿಂದು ನಡೆಯಲಿದೆ. ಬೆಂಗಳೂರಿನ ಬನಶಂಕರಿ ಎರಡನೇ ಹಂತದ ಪದ್ಮನಾಭನಗರದಲ್ಲಿರುವ ಅಪೆಕ್ಸ್ ಬ್ಯಾಂಕ್ ತರಬೇತಿ ಕೇಂದ್ರದಲ್ಲಿ ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಪುದುಚೇರಿ, ಅಂಡಮಾನ್ ನಿಕೋಬಾರ್ ದ್ವೀಪಗಳು, ಲಕ್ಷದ್ವೀಪಗಳನ್ನು ಒಳಗೊಂಡ ಪ್ರಾದೇಶಿಕ ಕಾರ್ಯಾಗಾರವನ್ನು ರಾಷ್ಟ್ರೀಯ ಸಹಕಾರ ನೀತಿ ಸಚಿವಾಲಯ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುತ್ತಿದೆ. ಮಾಜಿ ಕೇಂದ್ರ ಸಚಿವ ಹಾಗೂ ರಾಷ್ಟ್ರೀಯ ಸಹಕಾರ ನೀತಿ ಸಮಿತಿ ಅಧ್ಯಕ್ಷ ಸುರೇಶ್ ಪ್ರಭು ಅವರು ಭಾರತ ಸರ್ಕಾರದ ಹೊಸ ಸಹಕಾರ ನೀತಿ ೨೦೨೩ ಮತ್ತು ಕರಡು ನೀತಿಯಲ್ಲಿ ಅನುಸರಿಸಲಾದ ನಿಬಂಧನೆಗಳು, ವಿಧಾನ ಮತ್ತು ಪ್ರಕ್ರಿಯೆಯ ಕುರಿತು ಮಾತನಾಡಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
