ನವದೆಹಲಿ,ಆ್ಯಂಕರ್:ಸರಕು ಮತ್ತು ಸೇವಾ ತೆರಿಗೆ-ಜಿ ಎಸ್ ಟಿ ಸಂಗ್ರಹದಲ್ಲಿ ಮಾರ್ಚ್ ಅಂತ್ಯದ ವೇಳೆಗೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ೧ ಲಕ್ಷ ೭೮ ಸಾವಿರ ಕೋಟಿ ರೂಪಾಯಿಗಳ ಸಂಗ್ರಹದೊಂದಿಗೆ ಎರಡನೇ ಬಾರಿಗೆ ಅತಿ ಹೆಚ್ಚು ತೆರಿಗೆ ಸಂಗ್ರಹ ಮಾಡಲಾಗಿದೆ.
ಕಳೆದ ವರ್ಷದ ಪ್ರಗತಿಗೆ ಹೋಲಿಕೆ ಮಾಡಿದರೆ, ಇದು ಶೇಕಡ ೧೧ಕ್ಕಿಂತ ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ದೇಶೀಯ ವಹಿವಾಟುಗಳಿಂದ ಸಂಗ್ರಹಿಸಲಾದ ಜಿಎಸ್ಟಿ ಪ್ರಮಾಣದಲ್ಲಿ ಶೇಕಡ ೧೭.೬ರಷ್ಟು ಏರಿಕೆ ಕಂಡು ಬಂದಿದ್ದು, ಇದೊಂದು ಗಮನಾರ್ಹ ಅಂಶವಾಗಿದೆ ಎಂದು ಸಚಿವಾಲಯ ಹೇಳಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಸಾರಾಸರಿ ಮಾಸಿಕ ಸಂಗ್ರಹ ಪ್ರಮಾಣ ೧ ಲಕ್ಷ ೬೮ ಸಾವಿರ ಕೋಟಿ ರೂಪಾಯಿಗಳಷ್ಟಿದ್ದು, ಅದರ ಹಿಂದಿನ ಆರ್ಥಿಕ ವರ್ಷದಲ್ಲಿ ಸರಾಸರಿ ಮಾಸಿಕ ಸಂಗ್ರಹ ಪ್ರಮಾಣ ೧ ಲಕ್ಷ ೫೦ ಸಾವಿರ ಕೋಟಿ ರೂಪಾಯಿಗಳಷ್ಟಿತ್ತು ಎಂದು ಸಚಿವಾಲಯ ಮಾಹಿತಿ ನೀಡಿದೆ.
