ನವದೆಹಲಿ, 24 ಮಾರ್ಚ್ : ಆ್ಯಂಕರ್: ಭಾರತದ ವಿದೇಶ ವಿನಿಮಯ ಮೀಸಲು ನಿಧಿ ಕಳೆದ ಕೆಲ ವಾರಗಳಿಂದ ಕಾಣುತ್ತಿರುವ ಏರಿಕೆ ಮುಂದುವರಿದಿದೆ. ಆರ್ ಬಿ ಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಫಾರೆಕ್ಸ್ ರಿಸರ್ವ್ಸ್ 642.492 ಬಿಲಿಯನ್ ಡಾಲರ್ಗೆ ಇದು. ಇದು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 645 ಬಿಲಿಯನ್ ಡಾಲರ್ಗೆ ಹತ್ತಿರ ಇದೆ. ಮಾರ್ಚ್ 15ರಂದು ಅಂತ್ಯಗೊಂಡ ವಾರದಲ್ಲಿ 6.396 ಬಿಲಿಯನ್ ಡಾಲರ್ನಷ್ಟು ನಿಧಿ ಹೆಚ್ಚಳವಾಗಿದೆ. ಅದಕ್ಕೆ ಹಿಂದಿನ ವಾರದಲ್ಲಿ 10.47 ಬಿಲಿಯನ್ ಡಾಲರ್ನಷ್ಟು ಹೆಚ್ಚಾಗಿತ್ತು. ಸತತ ನಾಲ್ಕೈದು ವಾರಗಳ ಫಾರೆಕ್ಸ್ ಸಂಪತ್ತು ಹೆಚ್ಚಳ ಗಳಿಸುತ್ತಾ ಬಂದಿದೆ.
ಆರ್ ಬಿ ಐ ದತ್ತಾಂಶದ ಪ್ರಕಾರ ವಿದೇಶೀ ವಿನಿಮಯ ಮೀಸಲು ನಿಧಿ ಪೈಕಿ ಪ್ರಮುಖ ಭಾಗವಾಗಿರುವ ಕರೆನ್ಸಿ ಆಸ್ತಿಯೇ 6.034 ಬಿಲಿಯನ್ ಡಾಲರ್ನಷ್ಟು ಏರಿಕೆ ಆಗಿದೆ. ಗೋಲ್ಡ್ ರಿಸರ್ವ್ಸ್ 425 ಮಿಲಿಯನ್ ಡಾಲರ್, ಎಸ್ಡಿಆರ್ 65 ಮಿಲಿಯನ್ ಡಾಲರ್ ಮತ್ತು ಐಎಂಎಫ್ ನಲ್ಲಿನ ನಿಧಿ 129 ಮಿಲಿಯನ್ ಡಾಲರ್ನಷ್ಟು ಹೆಚ್ಚಳವಾಗಿರುವುದು ತಿಳಿದುಬಂದಿದೆ.
ಇಲ್ಲಿ ಫಾರೀನ್ ಕರೆನ್ಸಿ ಅಸೆಟ್ ನಲ್ಲಿ ಭಾರತದ ಫಾರೆಕ್ಸ್ ಮೀಸಲು ಸಂಪತ್ತಿನಲ್ಲಿರುವ ಯೂರೋ, ಪೌಂಡ್, ಯೆನ್ ಇತ್ಯಾದಿ ಡಾಲರೇತರ ಕರೆನ್ಸಿಗಳ ಮೌಲ್ಯವೂ ಒಳಗೊಂಡಿರುತ್ತದೆ.
