ನವದೆಹಲಿ, 16 ಫೆಬ್ರವರಿ :
ಆ್ಯಂಕರ್:ಭಾರತದಲ್ಲಿ 2024ರ ಜನವರಿ ತಿಂಗಳಲ್ಲಿ ಸರಕು ರಫ್ತು 36.92 ಬಿಲಿಯನ್ ಡಾಲರ್ ಮೌಲ್ಯದಷ್ಟಿದೆ. ಇನ್ನು, ಆಮದು ಮೊತ್ತ 54.41 ಬಿಲಿಯನ್ ಡಾಲರ್ ಇದೆ. ಇದರೊಂದಿಗೆ ಟ್ರೇಡ್ ಡೆಫಿಸಿಟ್ ಅಥವಾ ಆಮದು ಮತ್ತು ರಫ್ತು ನಡುವಿನ ಅಂತರ 17.49 ಬಿಲಿಯನ್ ಡಾಲರ್ನಷ್ಟಿದೆ. ಹಿಂದಿನ ತಿಂಗಳಲ್ಲಿ ಅಂದರೆ 2023ರ ಡಿಸೆಂಬರ್ ತಿಂಗಳಲ್ಲಿ ರಫ್ತಾದ ಸರಕುಗಳ ಮೌಲ್ಯ 38.34 ಬಿಲಿಯನ್ ಡಾಲರ್ ಇತ್ತು. ಆಮದು ಪ್ರಮಾಣ 58.25 ಬಿಲಿಯನ್ ಡಾಲರ್ನಷ್ಟಿತ್ತು. ಟ್ರೇಡ್ ಡೆಫಿಸಿಟ್ 20 ಬಿಲಿಯನ್ ಡಾಲರ್ ಸಮೀಪದಷ್ಟಿತ್ತು. ಡಿಸೆಂಬರ್ಗೆ ಹೋಲಿಸಿದರೆ ಜನವರಿಯಲ್ಲಿ ವ್ಯಾಪಾರ ಕೊರತೆ ತುಸು ಕಡಿಮೆ ಆಗಿದೆ.
ಮೇಲಿನದು ಸರಕುಗಳ ಅಂತಾರಾಷ್ಟ್ರೀಯ ವಹಿವಾಟಿನ ದತ್ತಾಂಶವಾದರೆ, ಸರ್ವಿಸ್ ಕ್ಷೇತ್ರದ ವ್ಯವಹಾರದ ಮಾಹಿತಿ ಬಿಡುಗಡೆ ಆಗಿದೆ. 2024ರ ಜನವರಿಯಲ್ಲಿ ಸರ್ವಿಸ್ ರಫ್ತು 32.80 ಬಿಲಿಯನ್ ಡಾಲರ್ ಇದ್ದರೆ, ಸರ್ವಿಸ್ ಆಮದು 16.05 ಬಿಲಿಯನ್ ಡಾಲರ್ ಇದೆ. ಇಲ್ಲಿ ಆಮದಿಗಿಂತ ರಫ್ತು ಹೆಚ್ಚಿದ್ದು ಇದನ್ನು ಟ್ರೇಡ್ ಸರ್ಪ್ಲಸ್ ಎನ್ನುತ್ತಾರೆ.
