ನವದೆಹಲಿ, 29 ಫೆಬ್ರವರಿ :ಆ್ಯಂಕರ್:
ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿ ವಿಶ್ವ ಗಣಿಗಾರಿಕೆ ಕಾಂಗ್ರೆಸ್ನ ಭಾರತೀಯ ರಾಷ್ಟ್ರೀಯ ಸಮಿತಿ ದೆಹಲಿಯಲ್ಲಿಂದು ವಿಜ್ಞಾನ ಭವನದಲ್ಲಿ “ಕಲ್ಲಿದ್ದಲು ಸಾಗಣೆ ಯೋಜನೆ ಮತ್ತು ನೀತಿ”ಗೆ ಚಾಲನೆ ನೀಡಲಿದೆ.
ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಲ್ಲಿದ್ದಲು ಸಾಗಣೆ ಯೋಜನೆ ಮತ್ತು ನೀತಿ ಯನ್ನು ಅನಾವರಣಗೊಳಿಸಲಿದ್ದಾರೆ. ನೀತಿ ಆಯೋಗದ ಹಿರಿಯ ಅಧಿಕಾರಿಗಳು ಮತ್ತು ಕಲ್ಲಿದ್ದಲು, ರೈಲ್ವೆ, ಇಂಧನ, ಉಕ್ಕು, ಗಣಿ, ಹಡಗು ಬಂದರು ಮತ್ತು ಜಲಮಾರ್ಗಗಳು ಸೇರಿದಂತೆ ವಿವಿಧ ಸಚಿವಾಲಯಗಳ ಉನ್ನತ ಅಧಿಕಾರಿಗಳು ಮತ್ತು ಕಲ್ಲಿದ್ದಲು, ಉಕ್ಕು, ಇಂಧನ ಮತ್ತು ಇತರ ವಲಯಗಳ ಉದ್ಯಮ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
೨೦೩೦ರ ಆರ್ಥಿಕ ವರ್ಷದ ವೇಳೆಗೆ ೧.೫ ಶತಕೋಟಿ ಟನ್ ಕಲ್ಲಿದ್ದಲನ್ನು ಉತ್ಪಾದಿಸುವ ಗುರಿಯೊಂದಿಗೆ ಕಲ್ಲಿದ್ದಲು ಸಚಿವಾಲಯವು ಭಾರತದ ಇಂಧನ ಭದ್ರತೆಗಾಗಿ ವಿವಿಧ ಉಪಕ್ರಮಗಳನ್ನು ಕೈಗೊಂಡಿದೆ. ತಾಂತ್ರಿಕವಾಗಿ ಮುಂದುವರಿದ, ಸಂಯೋಜಿತ, ವೆಚ್ಚ ಕಡಿತ, ಅಭಿವೃದ್ಧಿಗೊಳಿಸಲು ದೂರದೃಷ್ಟಿಯ ವಿಧಾನದೊಂದಿಗೆ ಸಮಗ್ರ ಕಲ್ಲಿದ್ದಲು ಸಾಗಣೆ ಯೋಜನೆ ಮತ್ತು ನೀತಿಯನ್ನು ರೂಪಿಸಲಾಗಿದೆ.
