ನವದೆಹಲಿ, 3 ಮಾರ್ಚ್ :
ಆ್ಯಂಕರ್:ಭಾರತದ ಫಾರೀನ್ ಎಕ್ಸ್ ಚೇಂಜ್ ರಿಸರ್ವ್ಸ್ ಮತ್ತೆ ಹೆಚ್ಚಾಗಿದೆ. ಆರ್ ಬಿ ಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಫೆಬ್ರುವರಿ 23ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ಮೀಸಲು ನಿಧಿ 2.975 ಬಿಲಿಯನ್ ಡಾಲರ್ ನಷ್ಟು ಹೆಚ್ಚಾಗಿದೆ. ಇದರೊಂದಿಗೆ ಭಾರತದ ವಿದೇಶೀ ವಿನಿಮಯ ಮೀಸಲು ಸಂಪತ್ತು 619.072 ಬಿಲಿಯನ್ ಡಾಲರ್ ಮಟ್ಟಕ್ಕೆ ಹೋಗಿದೆ. ಹಿಂದಿನ ಐದಾರು ವಾರಗಳಿಂದ ಫಾರೆಕ್ಸ್ ಸಂಪತ್ತು ಏರಿಳಿತ ಕಾಣುತ್ತಲೇ ಇದೆ. ಫೆಬ್ರುವರಿ 16ರಂದು ಅಂತ್ಯಗೊಂಡ ವಾರದಲ್ಲಿ 1.132 ಬಿಲಿಯನ್ ಡಾಲರ್ನಷ್ಟು ಇಳಿಕೆ ಕಂಡಿತ್ತು.
ಫೆಬ್ರುವರಿ 23ರ ವಾರದಲ್ಲಿ ಏರಿಕೆಯಾದ 2.975 ಬಿಲಿಯನ್ ಡಾಲರ್ ಫಾರೆಕ್ಸ್ ಸಂಪತ್ತಿನಲ್ಲಿ ಫಾರೀನ್ ಕರೆನ್ಸಿ ಸಂಪತ್ತಿನಲ್ಲೇ 2.405 ಬಿಲಿಯನ್ ಡಾಲರ್ನಷ್ಟು ಹೆಚ್ಚಳವಾಗಿದೆ. ಚಿನ್ನದ ಮೀಸಲು ಸಂಪತ್ತಿನಲ್ಲಿ ಅಲ್ಪ ಏರಿಕೆ ಆಗಿದೆ. 472 ಬಿಲಿಯನ್ ಡಾಲರ್ನಷ್ಟು ಮಾತ್ರ ಹೆಚ್ಚಳವಾಗಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಅಥವಾ ಎಸ್ ಡಿಆರ್ ಪ್ರಮಾಣ 89 ಮಿಲಿಯನ್ ಡಾಲರ್ ಏರಿಕೆ ಆಗಿದೆ. ಐಎಂಎಫ್ ಜೊತೆಗಿನ ಮೀಸಲು ಪ್ರಮಾಣ 9 ಮಿಲಿಯನ್ ಡಾಲರ್ ಹೆಚ್ಚಾಗಿರುವುದು ತಿಳಿದು ಬಂದಿದೆ.
