ದೆಹಲಿ, 6 ಜನವರಿ(ಹಿ.ಸ):
ಆ್ಯಂಕರ್ :
ಕೇಂದ್ರ ಸರ್ಕಾರ ಇದುವರೆಗೆ ೯೧ ಕಲ್ಲಿದ್ದಲು ಗಣಿಗಳನ್ನು ಯಶಸ್ವಿಯಾಗಿ ಹರಾಜು ಹಾಕಿದೆ. ಇದರಲ್ಲಿ ೬ ವಾಣಿಜ್ಯ ಗಣಿಗಳು ಈಗಾಗಲೇ ಕಲ್ಲಿದ್ದಲು ಉತ್ಪಾದನೆ ಆರಂಭಿಸಿದ್ದು, ಇನ್ನೂ ೩ ಗಣಿಗಳು ಮುಂಬರುವ ತಿಂಗಳುಗಳಲ್ಲಿ ಉತ್ಪಾದನೆ ಆರಂಭಿಸುವ ನಿರೀಕ್ಷೆಯಿದೆ ಎಂದು ಕಲ್ಲಿದ್ದಲು ಸಚಿವಾಲಯ ತಿಳಿಸಿದೆ. ಕಲ್ಲಿದ್ದಲು ಹರಾಜು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ೨೦೨೦ರಲ್ಲಿ ಆರಂಭಿಸಿದ ಆನ್ಲೈನ್ ಹರಾಜು ವ್ಯವಸ್ಥೆಯ ನೆರವಿನಿಂದ ಸಚಿವಾಲಯ ಇದುವರೆಗೆ ೭ ಸುತ್ತಿನ ಹರಾಜುಗಳನ್ನು ಪೂರ್ತಿಗೊಳಿಸಿದೆ. ಕಲ್ಲಿದ್ದಲು ಹರಾಜು ಪ್ರಕ್ರಿಯೆಯಿಂದ ವಾರ್ಷಿಕ ೩೩ ಸಾವಿರ ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದ್ದು, ಸರಾಸರಿ ೨೨೦ ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆಯಾಗಬಹುದೆಂದು ಅಂದಾಜಿಸಲಾಗಿದೆ. ಗಣಿಗಳ ಹರಾಜಿನಿಂದ ೩ ಲಕ್ಷ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ ಎಂದು ಕಲ್ಲಿದ್ದಲು ಸಚಿವಾಲಯ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್
