• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > Business > ಭಾರತ ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ಶಕ್ತಿ: ಪ್ರಲ್ಹಾದ್ ಜೋಷಿ
Business

ಭಾರತ ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ಶಕ್ತಿ: ಪ್ರಲ್ಹಾದ್ ಜೋಷಿ

CliQ INDIA
Last updated: December 18, 2023 12:00 am
CliQ INDIA
Share
3 Min Read
SHARE

ಬೆಂಗಳೂರು, 17 ಡಿಸೆಂಬರ್(ಹಿ.ಸ):

ಆ್ಯಂಕರ್ : ಇವತ್ತು ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ. 10 ವರ್ಷಗಳ ಹಿಂದೆ ಭಾರತವನ್ನು ಜಗತ್ತಿನ ದುರ್ಬಲ ಆರ್ಥಿಕ ರಾಷ್ಟ್ರ ಎಂದೇ ಕರೆಯಲಾಗುತ್ತಿತ್ತು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರು ತಿಳಿಸಿದರು.

ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಡಿಯಲ್ಲಿ ಆದರಣೀಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಮಾಹಿತಿಯ ಆರ್ಸಿ ಡಿಜಿಟಲ್ ವಾಹನವು ಇಂದು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಸಂತನಗರ ವಾರ್ಡಿನಲ್ಲಿ ಬಂದ ಸಂದರ್ಭದಲ್ಲಿ ಅದನ್ನು ವೀಕ್ಷಿಸಿ ಅವರು ಮಾತನಾಡಿದರು.

ಇಷ್ಟೊಂದು ಸಂಪದ್ಭರಿತ ರಾಷ್ಟ್ರ ಮತ್ತು ವಿಪುಲ ಮಾನವ ಸಂಪನ್ಮೂಲ ಇರುವ ದೇಶವಾದ ಭಾರತವನ್ನು ಸ್ವಾತಂತ್ರ್ಯಾನಂತರದ 75 ವರ್ಷಗಳ ಬಳಿಕವೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂದು ಕರೆಯಲಾಗುತ್ತಿದೆ. ದೇಶದ ಇತಿಹಾಸ 5 ಸಾವಿರ ವರ್ಷಗಳದ್ದಾಗಿದೆ. ಅದು ವಿಜಯದ ಇತಿಹಾಸ. ಇತಿಹಾಸವನ್ನೂ ಸುಳ್ಳಾಗಿ ಬರೆಯಲಾಗಿದೆ ಎಂದು ವಿವರಿಸಿದರು.

ಜಗತ್ತಿನಲ್ಲಿ ಅಭಿವೃದ್ಧಿ ಹೊಂದಿದ, ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೊಂದದೆ ಇರುವ ಹಿಂದುಳಿದ ರಾಷ್ಟ್ರಗಳು ಎಂಬ 3 ವಿಭಾಗಗಳಿವೆ. ಇದು ಪರಿಭಾಷೆಯಾಗಿದೆ. 10 ವರ್ಷಗಳಿಂದ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿ ಹೊಂದುವತ್ತ ದೊಡ್ಡ ಹೆಜ್ಜೆಯನ್ನು ಇಡಲಾಗಿದೆ. ಮುಂದಿನ 10 ವರ್ಷವೂ ನಾವು ಕೆಲಸ ಮಾಡುತ್ತಲೇ ಇರುತ್ತೇವೆ ಎಂದು ವಿಶ್ವಾಸದಿಂದ ನುಡಿದರು.

ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ನಾವು ಎರಡು ಕಲ್ಪನೆಗಳನ್ನು ಇಟ್ಟುಕೊಂಡಿದ್ದೇವೆ. ಈಗಾಗಲೇ ನಮ್ಮ ದೇಶ ಜಗತ್ತಿನ 5ನೇ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ. 10-11 ವರ್ಷಗಳ ಹಿಂದೆ 2009-14ರ ನಡುವಿನ ಅವಧಿಯಲ್ಲಿ ನಾವು ವಿರೋಧ ಪಕ್ಷದಲ್ಲಿದ್ದೆವು. ಆಗ ಸಂಸತ್ತಿನಲ್ಲಿ ಭಾರತದ ಆರ್ಥಿಕ ಸ್ಥಿತಿ ಗಂಭೀರವಾಗಿರುವುದು, ಭಾರತದ ಬ್ಯಾಂಕ್ಗಳ ಎನ್ಪಿಎ ಪರಿಣಾಮದ ಚರ್ಚೆ ನಡೆದಿತ್ತು. ಭಾರತವು ಜಗತ್ತಿನ ದುರ್ಬಲ ಆರ್ಥಿಕ ರಾಷ್ಟ್ರ ಎಂದೇ ಬಿಂಬಿತವಾಗಿತ್ತು ಎಂದು ತಿಳಿಸಿದರು.

ಇಂಗ್ಲೆಂಡನ್ನು ನಾವು ಹಿಂದಕ್ಕೆ ಹಾಕಿ ಐದನೇ ಸ್ಥಾನ ಪಡೆದಿದ್ದೇವೆ. ಮುಂದಿನ 3 ವರ್ಷಗಳಲ್ಲಿ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಬೇಕೆಂದು ಪ್ರಧಾನಿ ಮೋದಿಯವರು ಸಂಕಲ್ಪ ಮಾಡಿದ್ದಾರೆ ಎಂದು ತಿಳಿಸಿದರು. ಅಮೆರಿಕ, ಚೀನಾದ ಬಳಿಕ ನಮ್ಮ ಸ್ಥಾನ ಇರಲಿದೆ. ಮುಂದಿನ ವರ್ಷ ಇದೇ ಹೊತ್ತಿಗೆ ನಾವು ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿ ಆಗಲಿದ್ದೇವೆ ಎಂದು ವಿಶ್ವಾಸದಿಂದ ತಿಳಿಸಿದರು.

ಹಿಂದೆ ಯುಪಿಎ ಅವಧಿಯಲ್ಲಿ ಹಣದ ಕೊರತೆ ಕುರಿತು ಸ್ವತಃ ಸಚಿವರೊಬ್ಬರು ನನ್ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇವತ್ತು ಪ್ರತಿ ಸಂಪುಟ ಸಭೆಯಲ್ಲಿ ಪ್ರಧಾನಿಯವರು ವಿವಿಧ ಯೋಜನೆಗಳು, ಮಂಜೂರಾದ ಮೊತ್ತ, ಯೋಜನೆಯ ಪ್ರಗತಿ- ಸ್ಥಿತಿಗತಿ, ಖರ್ಚಾದ ಮೊತ್ತದ ಮಾಹಿತಿ ಪಡೆಯುತ್ತಾರೆ. ಹೆಚ್ಚು ಹಣ ಬೇಕಿದ್ದರೆ ಕೇಳಿ ಎನ್ನುತ್ತಾರೆ ಎಂದು ತಿಳಿಸಿದರು.

140 ಕೋಟಿ ಜನಸಂಖ್ಯೆ ನಮ್ಮದು. ಎಲ್ಲರ ತಲೆ ಮೇಲೊಂದು ಸೂರು (ಮನೆ) ನಮ್ಮ ಆಶಯ. 1960-2014ರವರೆಗೆ ಸುಮಾರು 54-55 ವರ್ಷಗಳಲ್ಲಿ 3.58 ಕೋಟಿ ಮನೆ ನಿರ್ಮಿಸಿದ್ದರು. ಮೋದಿಯವರ 10 ವರ್ಷ ಆಡಳಿತ ಮುಗಿಯುವ ಮೊದಲೇ 4 ಕೋಟಿ ಮನೆಗಳನ್ನು ಕಟ್ಟಿದ್ದೇವೆ. 2025-26ರಲ್ಲಿ ಮನೆ ಇಲ್ಲದ ಎಲ್ಲರಿಗೂ ಮನೆ ಕೊಡುವ ಗುರಿ ಇದೆ ಎಂದು ಹೇಳಿದರು.

ಯೋಜನೆಯ ಪ್ರಯೋಜನ ಪಡೆದವರ ಯಶೋಗಾಥೆಯನ್ನು ತಿಳಿಸಲಾಗುತ್ತಿದೆ. ಆ ಮೂಲಕ ವಿಶ್ವಾಸ ಬೆಳೆಸುವುದು, ಯೋಜನೆಯ ಪ್ರಯೋಜನ ಸಿಗದವರಿಗೆ ಅದನ್ನು ತಲುಪಿಸುವ ಉದ್ದೇಶ ಈ ವಾಹನದ್ದು ಎಂದು ಮಾಹಿತಿ ನೀಡಿದರು.

ಇದು ಮೋದಿ ಗ್ಯಾರಂಟಿ ವಾಹನ..

25 ಲಕ್ಷಕ್ಕಿಂತ ಕಡಿಮೆ ಮೊತ್ತದಲ್ಲಿ ಮನೆ ನಿರ್ಮಿಸುವ ಮಧ್ಯಮ ವರ್ಗದವರಿಗೆ ಶೇ 4 ಬಡ್ಡಿದರದ ಸಾಲ ಸಿಗುತ್ತಿದೆ. ಎಲ್ಲರಿಗೂ ವಿವಿಧ ಯೋಜನೆಗಳ ಲಾಭ ಸಿಗಲು ಈ ವಾಹನಗಳು ದೇಶದಲ್ಲಿ ಓಡಾಡುತ್ತಿವೆ ಎಂದರು. ಇದನ್ನು ಜನರು ‘ಮೋದಿ ಗ್ಯಾರಂಟಿ ವಾಹನ’ ಎಂದೇ ಕರೆಯುತ್ತಿದ್ದಾರೆ ಎಂದು ಪ್ರಲ್ಹಾದ್ ಜೋಷಿ ಅವರು ತಿಳಿಸಿದರು.

ಸಂಸದ ಪಿ.ಸಿ.ಮೋಹನ್ ಬೆಂಗಳೂರು ಕೇಂದ್ರ ಅಧ್ಯಕ್ಷ ಮಂಜುನಾಥ್, ಪ್ರಮುಖರಾದ ಎಂ.ಚಂದ್ರು, ಸಂಪತ್ ಕುಮಾರ್, ಎಂ.ಗೋಪಿ, ಗುಣಶೇಖರ್, ಮಂಡಲ ಅಧ್ಯಕ್ಷ ಬಾಲಾಜಿ ಮಣಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್

You Might Also Like

ಷೇರು ಮಾರುಕಟ್ಟೆಯಲ್ಲಿ ಏರಿಕೆ | BulletsIn
ಏಷ್ಯಾದಲ್ಲಿ ಮಿಶ್ರ ವ್ಯಾಪಾರದೊಂದಿಗೆ ಜಾಗತಿಕ ಮಾರುಕಟ್ಟೆಗಳಿಂದ ಮಿಶ್ರ ಸಂಕೇತಗಳು | BulletsIn
ಜಾಗತಿಕ ಮಾರುಕಟ್ಟೆಯಿಂದ ಸಕಾರಾತ್ಮಕ ಸೂಚನೆ | BulletsIn
ಎಸ್ ಬಿ ಐ ಕಾಂಟ್ರಾ ಫಂಡ್; ಒಂದು ಲಕ್ಷಕ್ಕೆ 84 ಲಕ್ಷ ಲಾಭ
 ಕೇರಳದಲ್ಲಿ ಇಂದಿನಿಂದ ಕಡಲ ವಿಮಾನ ಪ್ರವಾಸ | BulletsIn

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಪ್ರಸಾದ್ ಅಬ್ಬಯ್ಯ ಮನೆಗೆ ಟಿಪ್ಪು ಹೆಸರು ಇಟ್ಟುಕೊಳ್ಳಲಿ, – ಸಿ.ಟಿ ರವಿ
Next Article ವಿಶ್ವದ ಅತಿದೊಡ್ಡ ಕಟ್ಟಡ ಉದ್ಘಾಟಿಸಿದ ಪ್ರಧಾನಿ ಮೋದಿ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?