ವಾಷಿಂಗ್ಟನ್,21 ಡಿಸೆಂಬರ್(ಹಿ.ಸ):
ಆ್ಯಂಕರ್ :
ತನ್ನ ಸ್ಮಾರ್ಟ್ವಾಚ್ಗಳಿಗೆ ಅಮೆರಿಕದಲ್ಲಿ ನಿಷೇಧಗೊಳ್ಳುವ ಭೀತಿ ಆ್ಯಪಲ್ ಸಂಸ್ಥೆಗೆ ಎದುರಾಗಿದೆ. ಮೆಡಿಕಲ್ ಡಿವೈಸ್ ಸಂಸ್ಥೆಯೊಂದು ಸ್ಮಾರ್ಟ್ವಾಚ್ಗೆ ಸಂಬಂಧಿಸಿದ ಪೇಟೆಂಟ್ ವಿಚಾರವಾಗಿ ದಾಖಲಿಸಿದ್ದ ವ್ಯಾಜ್ಯವೊಂದರಲ್ಲಿ ಆ್ಯಪಲ್ಗೆ ವಿರುದ್ಧವಾಗಿ ಕೋರ್ಟ್ ತೀರ್ಪು ಬಂದಿತ್ತು. ಈ ಪ್ರಕರಣದಲ್ಲಿ ಆ್ಯಪಲ್ ಪರವಾಗಿ ಸರ್ಕಾರ ನಿಲ್ಲುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಹೀಗಾಗಿ, ನಿಷೇಧದ ತೂಗುಗತ್ತಿ ಆ್ಯಪಲ್ ಸ್ಮಾರ್ಟ್ವಾಚ್ಗಳ ಮೇಲಿದೆ. ಐಫೋನ್ ಹೊರತುಪಡಿಸಿದರೆ ಆ್ಯಪಲ್ನ ಅತಿಹೆಚ್ಚು ಮಾರಾಟದ ಉತ್ಪನ್ನವೆಂದರೆ ಅದರ ಸ್ಮಾರ್ಟ್ವಾಚುಗಳು. ಆ್ಯಪಲ್ನ ಸೀರೀಸ್ 9 ಮತ್ತು ಅಲ್ಟ್ರಾ 2 ಸ್ಮಾರ್ಟ್ವಾಚ್ಗಳ ಮಾರಾಟವನ್ನು ಅಮೆರಿಕದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಿದೆ. ಇವೆರಡು ವಾಚುಗಳಲ್ಲಿ ಪೇಟೆಂಟ್ ಉಲ್ಲಂಘನೆ ಆಗಿರುವ ಆರೋಪ ಇದೆ. ಇದು ಅಮೆರಿಕದಲ್ಲಿ ತನ್ನ ಸ್ಮಾರ್ಟ್ವಾಚ್ಗೆ ನಿಷೇಧವಾಗುವ ಸುಳಿವು ಆ್ಯಪಲ್ಗೆ ಸಿಕ್ಕಿರಬಹುದು.
ಹಿಂದೂಸ್ತಾನ್ ಸಮಾಚಾರ್
