ಮುಂಬೈ, 8 ಡಿಸೆಂಬರ್(ಹಿ.ಸ):
ಆ್ಯಂಕರ್ :
ಪೇಟಿಎಂನ ಷೇರುಬೆಲೆ ಇಂದು ಗುರುವಾರ ತೀವ್ರ ಮಟ್ಟದಲ್ಲಿ ಕುಸಿತ ಅನುಭವಿಸಿದೆ. ಪೇಟಿಎಂನ ಮಾತೃಸಂಸ್ಥೆ ಒನ್97 ಕಮ್ಯೂನಿಕೇಶನ್ಸ್ ಷೇರುಬೆಲೆ ಶೇ 20ರಷ್ಟು ಇಳಿಕೆ ಕಂಡಿದೆ. ಎರಡು ವರ್ಷದ ಹಿಂದೆ ಷೇರುಪೇಟೆಗೆ ಲಿಸ್ಟ್ ಆದಾಗಿನಿಂದ ಒಂದೇ ದಿನದಲ್ಲಿ ಪೇಟಿಎಂ ಅನುಭವಿಸಿದ ಅತಿದೊಡ್ಡ ಹಿನ್ನಡೆ ಇದಾಗಿದೆ.
ಪೇಟಿಎಂ ಷೇರುಬೆಲೆ ಕುಸಿಯಲು ಏನು ಕಾರಣ?
ಕಡಿಮೆ ಮೌಲ್ಯದ ಸಾಲವನ್ನು ಹೆಚ್ಚು ನೀಡುವುದಿಲ್ಲ ಎಂದು ಡಿಸೆಂಬರ್ 6ರಂದು ಪೇಟಿಎಂ ಹೇಳಿತ್ತು.
ಗೋಲ್ಡ್ಮ್ಯಾನ್ ಸ್ಯಾಕ್ಸ್ ಸಂಸ್ಥೆಯು ಪೇಟಿಎಂ ಷೇರಿನ ಪ್ರೈಸ್ ಟಾರ್ಗೆಟ್ ಅನ್ನು 1,250 ರೂನಿಂದ 840 ರೂಗೆ ಇಳಿಸಿತ್ತು.
ಗೋಲ್ಡ್ಮ್ಯಾನ್ ಸ್ಯಾಕ್ಸ್ ಪ್ರಕಾರ ಪೇಟಿಎಂನ ನಿವ್ವಳ ಆದಾಯ ಮೊದಲ ಬಾರಿಗೆ ಮೈನಸ್ ಮಟ್ಟದಿಂದ ಮೇಲೇರುವುದು 2025-26ರಲ್ಲಿ. ಈ ಹಂತಕ್ಕೆ ಪೇಟಿಎಂ ನಿರೀಕ್ಷೆಗಿಂತ ವಿಳಂಬವಾಗಿ ಬರುತ್ತಿದೆ. ಅಂದರೆ ಪೇಟಿಎಂ ಸಂಸ್ಥೆ ಲಾಭದ ಹಳಿಗೆ ಒಂದು ವರ್ಷ ತಡವಾಗಿ ಬರಲಿದೆ. ಈ ಕಾರಣಕ್ಕೆ ಒನ್97 ಕಮ್ಯುನಿಕೇಶನ್ಸ್ನ ಷೇರು ಪ್ರೈಸ್ ಟಾರ್ಗೆಟ್ ಅನ್ನು ಗೋಲ್ಡ್ಮ್ಯಾನ್ ಸ್ಯಾಕ್ಸ್ ಇಳಿಸಿರುವುದು.
ಹಿಂದೂಸ್ತಾನ್ ಸಮಾಚಾರ್
